ವಿಜಯದಶಮಿ ಉತ್ಸವ: ದೇಶಾಭಿಮಾನ ಮೂಡಿಸಿದ ಆರ್ ಎಸ್ಎಸ್‌ ಬಾಲಕರ ಪಥಸಂಚಲನ

ಹೊಸದಿಗಂತ ವರದಿ,ಬಾಗಲಕೋಟೆ:

ವಿಜಯದಶಮಿ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಬಾಗಲಕೋಟೆ‌ ನಗರದ ವಿದ್ಯಾಗಿರಿಯಲ್ಲಿ ರಾಷ್ಟ್ರೀಯ ಸ್ವಯಂ‌ಸೇವಕ ಸಂಘದ ಬಾಲಕರಿಂದ‌ ನಡೆದ ಪಥಸಂಚಲನ ದೇಶಾಭಿಮಾನ ಮೂಡಿಸುವಲ್ಲಿ ಯಶಸ್ವಿಯಾಯಿತು.

ವಿದ್ಯಾಗಿರಿಯ ಅಥಣಿ ಕಲ್ಯಾಣಮಂಟಪದ ಆವರಣದಿಂದ ಭಾನುವಾರ ಸಂಜೆ ಆರಂಭಗೊಂಡ ಬಾಲಕರ‌ ಪಥಸಂಚಲನ ವಿದ್ಯಾಗಿರಿಯ ೬ ನೇ ಕ್ರಾಸ್, ೭೮,೯,೧೦,೧೧,೧೨,೧೩,೧೪ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ‌ ಬಸವೇಶ್ವರ ಎಂಜನೀಯರಿಂಗ್ ಕಾಲೇಜ್ ಕ್ರಾಸ್ ಮೂಲಕ ಗೌರಿಶಂಕರ‌ ಕಲ್ಯಾಣಮಂಟಪ ತಲುಪಿ ಸಾರ್ವಜನಿಕ ಸಭೆಯಾಗಿ ಮಾರ್ಪಟ್ಟಿತು.

ಕಿಕ್ಕಿರಿದು ಸೇರಿದ ಜನ : ವಿದ್ಯಾಗಿರಿಯ ಬಸವೇಶ್ವರ ಎಂಜನೀಯರಿಂಗ್ ಕಾಲೇಜ್ ವೃತ್ತದಲ್ಲಿ ಬಾಲಕರ‌ ಪಥಸಂಚಲನ ಆಗಮಿಸುತ್ತಿದ್ದಂತೆ‌ ವೃತ್ತದಲ್ಲಿ ಕಿಕ್ಕಿರಿದು ಸೇರಿದ ಜನ ದೇಶಭಕ್ತಿಯ ಜೈಕಾರ‌ ಹಾಕುತ್ತಿದ್ದಂತೆ‌ ನೆರೆದವರನ್ನು ಮೈ ರೋಮಾಂಚನಗೊಳಿಸಿತು.

ಹೂವು ಸಮರ್ಪಣೆ : ಬಾಲಕರ ಪಥಸಂಚಲನ ಹಾಯ್ದು ಹೋಗುವ ಪ್ರತಿಯೊಂದು ಮಾರ್ಗದಲ್ಲಿ ಮಹಿಳೆಯರು ವಿವಿಧ ನಮೂನೆಯ ಬಣ್ಣ ಬಣ್ಣದ‌‌‌ ಚಿತ್ತಸರಗಳನ್ನು ಬಿಡಿಸಿ ಬಾಲಕರ‌ ಪಥ ಸಂಚಲನ ಅದ್ದೂರಿಯಾಗಿ ಸ್ವಾಗತಿಸಿದರು.
ಪಟಾಕಿ ಸಿಡಿಸಿ‌ ಸಂಭ್ರಮ
ಬಾಲಕರ ಪಥಸಂಚಲನ ಪ್ರತಿಯೊಂದು ಕ್ರಾಸ್ ಪ್ರವೇಶ ಮಾಡುತ್ತಿದ್ದಂತೆ ಯುವಕರು ಪಟಾಕಿ ಸಿಡಿಸಿ ಸ್ವಾಗತಿಸಿ ಜೈಕಾರ ಹಾಕಿದರು.
ಗಮನಸೆಳೆದ ವೇಷ : ಬಾಲಕರ ಪಥ ಸಂಚಲನ ಬರುವ ಬಸವೇಶ್ವರ ಎಂಜನೀಯರಿಂಗ್ ಕಾಲೇಜ್ ವೃತ್ತದಲ್ಲಿ ಕಿತ್ತೂರ‌ಚೆನ್ನಮ್ಮ, ಛತ್ರಪತಿ ಶಿವಾಜಿ, ಸುಭಾಸ ಚಂದ್ರಭೋಷ್, ಸೈನಿಕರು ಸೇರಿದಂತೆ ದೇಶಭಕ್ತರ ವೇಷವನ್ನು ಹಾಕಿ ಪುಟ್ಟ ಬಾಲಕ,ಬಾಲಕಿಯರು ಗಮನಸೆಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!