ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೀಕರಣಗೊಳಿಸಿರುವ ವಿಜಯನಗರ ಜಿಲ್ಲೆಯ ಹೊಸಪೇಟೆ ರೈಲು ನಿಲ್ದಾಣವನ್ನು ಇಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಲಿದ್ದಾರೆ. ಲೈಲ್ವೆ ನಿಲ್ದಾಣಕ್ಕೆ ವಿಜಯನಗರ ಸಾಮ್ರಾಜ್ಯವ ಗತವೈಭವ ಮರುಕಳಿಸಿದಂತಿದೆ. ಕೇಂದ್ರ ಪ್ರವಾಸೋದ್ಯಮ ಇಲಾಖೆ ಹಾಗೂ ರೈಲ್ವೆ ಸಚಿವಾಲಯದ ಪಾಲುದಾರಿಕೆಯಲ್ಲಿ 13.5 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದೆ.
ಪ್ರವೇಶ ದ್ವಾರ ಹಂಪಿ ಕಲ್ಲಿನ ರಥ ನೋಡದಂತಾಗುತ್ತದೆ. ಹಂಪಿಯಲ್ಲಿರುವ ವಾಸ್ತುಶಿಲ್ಪಗಳಂತೆಯೇ ನಿಲ್ದಾಣದ ಗೋಡೆಗಳು ಕಾಣಸಿಗುತ್ತವೆ.