Sunday, June 26, 2022

Latest Posts

ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ 485 ಮಂದಿಗೆ ಕೊರೋನಾ ದೃಢ

ಹೊಸದಿಗಂತ ಆನ್‌ಲೈನ್‌ನ ವಿನಮ್ರ ವಿನಂತಿ…

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………..

ಹೊಸ ದಿಗಂತ ವರದಿ, ವಿಜಯಪುರ:

ಜಿಲ್ಲೆಯಲ್ಲಿ ಶುಕ್ರವಾರ 485 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 473 ಸೋಂಕಿತರು ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ 66 ವರ್ಷದ ವೃದ್ಧ (ರೋಗಿ ಸಂಖ್ಯೆ- 1278226), 66 ವರ್ಷದ ವೃದ್ಧ (ರೋಗಿ ಸಂಖ್ಯೆ- 1338521) ಹಾಗೂ 60 ವರ್ಷದ ವೃದ್ಧೆ (ರೋಗಿ ಸಂಖ್ಯೆ 1072418) ಸೇರಿದಂತೆ ಮತ್ತೆ ಮೂವರು ಸಾವಿಗೀಡಾಗಿದ್ದು, ಇಲ್ಲಿವರೆಗೆ ಜಿಲ್ಲೆಯಲ್ಲಿ 238 ಜನರು ಅಸುನೀಗಿದ್ದಾರೆ ಎಂದರು.
ನಗರದಲ್ಲಿ 192, ವಿಜಯಪುರ ಗ್ರಾಮೀಣ 39, ಬಬಲೇಶ್ವರ 4, ತಿಕೋಟಾ 4, ಬಸವನಬಾಗೇವಾಡಿ 54, ಕೊಲ್ಹಾರ 1, ನಿಡಗುಂದಿ 3, ಇಂಡಿ 45, ಚಡಚಣ 6, ಮುದ್ದೇಬಿಹಾಳ 66, ತಾಳಿಕೋಟೆ 7, ಸಿಂದಗಿ 60 ಹಾಗೂ ಇತರೆ ಜಿಲ್ಲೆಯ 4 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss