ಹೊಸ ದಿಗಂತ ವರದಿ, ವಿಜಯಪುರ:
ಇಲ್ಲಿನ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿ ಅನಾರೋಗ್ಯದಿಂದ ಸಾವಿಗೀಡಾದ ಘಟನೆ ನಡೆದಿದೆ.
ಜತ್ತ ತಾಲೂಕಿನ ಸೂಸಲಾದ ಗ್ರಾಮದ ಮಹಾದೇವ ಬಿರಾದಾರ (50) ಮೃತಪಟ್ಟ ಕೈದಿ.
ಈತ ಮನೆಯಲ್ಲಿ ನಡೆದ ಕೌಟುಂಬಿಕ ಕಲಹದಲ್ಲಿ ಆರೋಪಿಯಾಗಿದ್ದು, ಕೇಂದ್ರ ಕಾರಾಗೃಹದಲ್ಲಿದ ಬ್ಯಾರಕ್ನಲ್ಲಿ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದ್ದಾನೆ. ಜೈಲ್ ಸಿಬ್ಬಂದಿ ತಕ್ಷಣ ಕೈದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ ಎಂದು ಕೇಂದ್ರ ಕಾರಾಗೃಹ ಅಧೀಕ್ಷಕ ಐ.ಜಿ. ಮ್ಯಾಗೇರಿ ತಿಳಿಸಿದ್ದಾರೆ.