ಒಟಿಟಿಗೆ ಲಗ್ಗೆ ಇಟ್ಟ ತೆರೆ ಮೇಲೆ ಅಬ್ಬರಿಸಿದ ವಿಕ್ರಮ್: ಬಿಡುಗಡೆ ದಿನಾಂಕ ಘೋಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಮಲ್ ಹಾಸನ್ ನಟನೆಯ ವಿಕ್ರಮ್ (Vikram) ಸಿನಿಮಾ ಈಗಾಗಲೇ ತೆರೆ ಮೇಲೆ ಕಮಾಲ್ ಮಾಡಿದ್ದೂ, ಇದೀಗ ಒಟಿಟಿಯಲ್ಲೂ ಸದ್ದು ಮಾಡಲು ಸಿದ್ಧವಾಗಿದೆ.
ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿರುವ ವಿಕ್ರಮ್ ಸಿನಿಮಾ ಕೋಟಿ ಕೋಟಿ ಕಮಾಯಿ ಮಾಡಿದೆ. ಕಮಲ್ ಹಾಸನ್ ವೃತ್ತಿ ಜೀವನದಲ್ಲೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಇದಾಗಿದೆ. ಈಗಾಗಲೇ ಕಲೆಕ್ಷನ್ 300 ಕೋಟಿ ರೂಪಾಯಿ ಸಮೀಕಕ್ಕೆ ಬಂದಿದೆ. ಇದೀಗ ಒಟಿಟಿಯಲ್ಲಿ ರಿಲೀಸ್ ಡೇಟ್ ಅನೌನ್ಸ್ ಆಗಿದೆ.

ವಿಕ್ರಮ್ ಸಿನಿಮಾ ಮುಂದಿನ ತಿಂಗಳು ಜುಲೈ 8ರಂದು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಂದಹಾಗೆ ಒಟಿಟಿಗಳ ದೈತ್ಯಗಳಲ್ಲಿ ಒಂದಾಗಿರುವ ಡೆಸ್ನಿಪ್ಲಸ್ ಹಾಟ್ ಸ್ಟಾರ್ ನಲ್ಲಿ ವಿಕ್ರಮ್ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ವಿಕ್ರಮ್ ಸಿನಿಮಾದ ಪ್ರೋಮೋ ರಿಲೀಸ್ ಮಾಡುವ ಮೂಲಕ ಬಿಡುಗಡೆ ದಿನಾಂಕ ರಿವೀಲ್ ಮಾಡಲಾಗಿದೆ.
ವಿಕ್ರಮ್ ಸಿನಿಮಾ ಜೂನ್ 3ರಂದು ತೆರೆಗ ಬಂದಿತ್ತು. ತಮಿಳು ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್ ಆಗಿದ್ದು ಎಲ್ಲಾ ಭಾಷೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!