ಬಾಕ್ಸಾಫೀಸ್‌ನಲ್ಲಿ ‌ಕಿಚ್ಚನ ಅಬ್ಬರ… ‌ʼವಿಕ್ರಾಂತ್ ರೋಣʼನ ಎದುರು ಮಂಕಾದ ರಣಬೀರ್ ಕಪೂರ್ ಶಂಶೇರಾ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರವು ಭರ್ಜರಿ ಆರಂಭ ಪಡೆದಿದೆ. ಚಿತ್ರವು ಎಲ್ಲೆಡೆಯಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿದೆ. ಬಿಡುಗಡೆಯಾದ ಮೂರೇ ದಿನಗಳಲ್ಲಿ, ರಣಬೀರ್ ಕಪೂರ್ ಅಭಿನಯದ ಬಾಲಿವುಡ್‌ ಚಿತ್ರ ಶಂಶೇರಾದ ಮೊದಲ ವಾರಾಂತ್ಯದ ಕಲೆಕ್ಷನ್‌ ಅನ್ನು ಬ್ರೇಕ್‌ ಮಾಡಿದೆ.
ವಿಕ್ರಾಂತ್ ರೋಣ ಚಿತ್ರವನ್ನು ಅಭಿಮಾನಿಳು ಮೆಚ್ಚಿದ್ದಾರೆ. ಚಿತ್ರವು 3ನೇ ದಿನಕ್ಕೆ 10 ಕೋಟಿ ಕಲೆಕ್ಷನ್ ಮಾಡಿದೆ. ರಣಬೀರ್ ಕಪೂರ್ ಅವರ ಚಿತ್ರ ಶಂಶೇರಾಗೆ ಮೊದಲ ವಾರದಲ್ಲಿ ಇಷ್ಟು ಕಲೆಕ್ಷನ್‌ ಮಾಡಿತ್ತು.  ಜುಲೈ 22ರಂದು ತೆರೆಗೆ ಬಂದ ಶಂಶೇರಾ ಇಲ್ಲಿಯವರೆಗೆ ಕೇವಲ 31 ಕೋಟಿ ಗಳಿಕೆ ಮಾಡಿದೆ. ವಿಕ್ರಾಂತ್‌ ರೋಣ ಬಿಡುಗಡೆ ಬಳಿಕ ಆ ಚಿತ್ರದ ಕಲೆಕ್ಷನ್ ಮತ್ತಷ್ಟು ಕುಸಿಯುತ್ತಿದೆ. ವಿಕ್ರಾಂತ್ ರೋಣಾಗೆ 2500 ಥಿಯೇಟರ್‌ ಗಳಲ್ಲಿ ಬಿಡುಗಡೆಯಾದರೆ, ಶಂಶೇರಾ ಬರೋಬ್ಬರಿ  5,250 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿತ್ತು.
ವಿಕ್ರಾಂತ್ ರೋಣ ಒಂದು ಫ್ಯಾಂಟಸಿ ಸಾಹಸಮಯ ಚಿತ್ರವಾಗಿದ್ದು, ಅನುಪ್ ಬಂಡಾರಿ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಕಿಚ್ಚ ಸುದೀಪ್, ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ತಾರಾಂಗಣದಲ್ಲಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ, ಆಶಿಕ್ ಕುಸುಗೊಳ್ಳಿ ಸಂಕಲನ ಮತ್ತು ವಿಲಿಯಂ ಡೇವಿಡ್ ಛಾಯಾಗ್ರಾಹರಾಗಿದ್ದು, ಚಿತ್ರ ಅಭಿಮಾನಿಗಳಿಂದ ಅದ್ಭುತ ರೆಸ್ಪಾನ್ಸ್‌ ಪಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!