ಮೊದಲ ದಿನವೇ ಅಬ್ಬರಿಸಿದ ‘ವಿಕ್ರಾಂತ್ ರೋಣ’: ಮೊದಲ ದಿನ ಕಲೆಕ್ಷನ್ ಎಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣಾ’ ಸಿನೆಮಾ ಜಗತ್ತಿನಾದ್ಯಂತ 2,500ಕ್ಕೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಬಾಕ್ಸ್ ಆಫೀಸ್‌ನಲ್ಲಿಯೂ ಸಹ ‘ವಿಕ್ರಾಂತ್ ರೋಣ’ ಅಬ್ಬರಿಸಿದ್ದಾನೆ.

ವಿಕ್ರಾಂತ್ ರೋಣ’ ಸಿನಿಮಾದ ಮೊದಲ ದಿನದ ಒಟ್ಟು ಗಳಿಕೆ ಕುರಿತು ಗಾಂಧಿನಗರದಲ್ಲಿ ಬೇಜಾನ್ ಟಾಕ್ ಆಗುತ್ತಿದೆ. ಅಂದುಕೊಂಡಂತೆ ಮೊದಲ ದಿನದ ಕಲೆಕ್ಷನ್ ಕೋಟಿ ಕೋಟಿ ಆಗಿದೆ ಎನ್ನಲಾಗುತ್ತಿದೆ. ಜೊತೆಗೆ ವಿಶ್ವಾದ್ಯಂತ ಮೊದಲ ದಿನ 9,000ಕ್ಕೂ ಅಧಿಕ ಪ್ರದರ್ಶನ ಕಂಡಿದೆ.
ಕರ್ನಾಟಕದಲ್ಲಿ ಮೊದಲ ದಿನ 325 ಸಿಂಗಲ್ ಸ್ಕ್ರೀನ್​, 65 ಮಲ್ಟಿಪ್ಲೆಕ್ಸ್​ನಲ್ಲಿ ಚಿತ್ರ ಬಿಡುಗಡೆಯಾಗಿದೆ. ಮೊದಲ ದಿನ ರಾಜ್ಯದಲ್ಲಿ 2,500 ಶೋಗಳು ಪ್ರದರ್ಶನಗೊಂಡಿವೆ. ಬೆಂಗಳೂರಿನ 40 ಮಲ್ಟಿಪ್ಲೆಕ್ಸ್​ನಲ್ಲಿ 800 ಶೋ ಪ್ರದರ್ಶನವಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಚಿತ್ರ ಪ್ರಾರಂಭಿಸಲಾಗಿತ್ತು.

ಆಂಧ್ರ, ತೆಲಂಗಾಣದಲ್ಲೂ ಸುದೀಪ್ ಹವಾ ಜೋರಾಗಿದೆ. ಹೈದರಾಬಾದ್​ನಲ್ಲಿ 350 ಸಿಂಗಲ್ ಸ್ಕ್ರೀನ್​ನಲ್ಲಿ ಸಿನಿಮಾ ಬಿಡುಗಡೆಯಾಗಿ ಮೊದಲ ದಿನ 1,400 ಶೋಗಳು ಪ್ರದರ್ಶನ ಕಂಡಿವೆ. ಅದೇ ರೀತಿ ತಮಿಳುನಾಡಿನಲ್ಲಿ 180 ಸಿಂಗಲ್ ಸ್ಕ್ರೀನ್ ಹಾಗೂ 70 ಮಲ್ಟಿಪ್ಲೆಕ್ಸ್​ನಲ್ಲಿ ವಿಕ್ರಾಂತ್ ರೋಣ ಅಬ್ಬರಿಸಿದ್ದಾನೆ. ಕೇರಳದಲ್ಲಿ 110 ಸ್ಕ್ರೀನ್​ನಲ್ಲಿ ಚಿತ್ರ ಬಿಡುಗಡೆಯಾಗಿ 600 ಕ್ಕೂ ಹೆಚ್ಚು ಶೋಗಳು ಆಗಿವೆ.

ಹಿಂದಿ ನಾಡಿನ 690 ಸ್ಕ್ರೀನ್​ನಲ್ಲಿ ವಿಕ್ರಾಂತ್ ರೋಣ ಬಿಡುಗಡೆಯಾಗಿ 2,800 ಶೋ ಪ್ರದರ್ಶನವಾಗಿವೆ. ಇದರೊಂದಿಗೆ ವಿದೇಶದಲ್ಲಿ 50ಕ್ಕೂ ಹೆಚ್ಚು ದೇಶಗಳಲ್ಲಿ ಸುದೀಪ್ ಸಿನಿಮಾ ರಿಲೀಸ್ ಆಗಿದೆ. ಓವರ್​ಸೀಸ್​ನ 600 ಸ್ಕ್ರೀನ್​ನಲ್ಲಿ ವಿಕ್ರಾಂತ್ ರೋಣ ರಿಲೀಸ್​ ಆಗಿ ಮೊದಲ ದಿನ 1,500 ಶೋಸ್ ಪ್ರದರ್ಶನಗೊಂಡಿದೆ.

ಕಿಚ್ಚನ ಹೊಸ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದೆ. ವಿಶ್ವಾದ್ಯಂತ 60 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ 22 ಕೋಟಿ, ತೆಲುಗು, ತಮಿಳು, ಕೇರಳ‌ ಸೇರಿ 10‌‌ ಕೋಟಿ, ಹಿಂದಿಯಲ್ಲಿ 20 ಕೋಟಿ ಹಾಗು ವಿದೇಶಗಳಲ್ಲಿ 8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಅಂತಾ ಹೇಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!