Thursday, August 11, 2022

Latest Posts

ಹಳ್ಳಿಯ ಈ ರೈತರು ಅಡುಗೆ ಮಾಡ್ತಾ ಮಾಡ್ತಾನೇ ಸಂಪಾದಿಸಿದ್ರು ನೋಡಿ ‘ಕೋಟಿ’!!

ಮೇಘನಾ ಶೆಟ್ಟಿ, ಶಿವಮೊಗ್ಗ.

ಈಗಂತೂ ಯೂಟ್ಯೂಬ್ ಓಪನ್ ಮಾಡೋದೇ ತಡ, ನೂರಾರು ಹೊಸ ಶೆಫ್‌ಗಳು ತಮ್ಮ ಖಾದ್ಯಗಳನ್ನು ನಮಗೆ ಉಣಬಡಿಸೋದಕ್ಕೆ ರೆಡಿ ಇರುತ್ತಾರೆ.
‘ಹಲೋ ಸ್ನೇಹಿತರೆ, ಹಾಯ್ ಫ್ರೆಂಡ್ಸ್, ನಮಸ್ಕಾರ ನನ್ನ ಬಂಧು ಮಿತ್ರರೇ…’ ಇಂಥ ನೂರು ವಿಡಿಯೋಗಳ ಮಧ್ಯೆ ವಿಭಿನ್ನವಾಗಿ ನಿಲ್ಲುತ್ತದೆ ತಮಿಳುನಾಡಿನ ‘ವಿಲೇಜ್ ಕುಕ್ಕಿಂಗ್ ಚಾನೆಲ್’.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಫೇಮಸ್ ಆಗಿರುವ ಈ ತಮಿಳುನಾಡಿನ ಆರು ಯುವ ರೈತರ ಕುಕ್ಕಿಂಗ್ ಚಾನೆಲ್‌ಗೆ ಒಂದು ಕೋಟಿ ಸಬ್ಸ್‌ಕ್ರೈಬರ‍್ಸ್ ಇದ್ದಾರೆ. ಒಂದು ಕೋಟಿ ವ್ಯೂವರ‍್ಸ್ ಪಡೆದ ಮೊದಲ ತಮಿಳು ಯೂಟ್ಯೂಬ್ ಚಾನೆಲ್ ಇದಾಗಿದೆ.

ಐಡಿಯಾ+ ಅನುಭವ
ತಮಿಳುನಾಡಿನ ಪಡುಕ್ಕೊಟ್ಟೈದ ಚಿನ್ನ ವೀರಮಂಗಲಂ ಅವರಿಗೆ ತಾವು ಮಾಡುವ ಕುಕ್ಕಿಂಗ್‌ನನ್ನು ಜಗತ್ತಿಗೂ ಪರಿಚಯಿಸುವ ಮನಸ್ಸಾಯಿತು. ಅಡುಗೆ ಮಾಡಲು ಬರೀ ಐಡಿಯಾ ಇದ್ರೆ ಸಾಲದು, ಅನುಭವ ಕೂಡ ಬೇಕಲ್ಲಾ? ಚಿನ್ನ ಅವರ ತಾತ ಪೆರಿಯತಂಬಿ ಈಗಾಗಲೇ ಕೇಟರಿಂಗ್ ಬ್ಯುಸಿನೆಸ್‌ನಲ್ಲಿ ಇದ್ದರು. ಹೊಸಬರ ಐಡಿಯಾ ಹಳಬರ ಅನುಭವ ಸೇರಿ ಯೂಟ್ಯೂಬ್ ಚಾನೆಲ್ ಆರಂಭವಾಯ್ತು.

Tamil Nadu Village Cooking Channel Creates History, Hits One Crore Subscribers On YouTubeಅಂಥದ್ದೇನು ಸ್ಪೆಶಲ್?
ಭಾರತೀಯ ಸಂಸ್ಕೃತಿಯನ್ನು ಬಿಂಬಿಸಿ, ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಟೆಕ್ನಿಕ್‌ಗಳನ್ನು ಇವರು ಬಳಸುತ್ತಾರೆ. ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸದೇ ಬಾಯಿಚಪ್ಪರಿಸುವ ರುಚಿಕರ ಆಹಾರ ತಯಾರಿಸುತ್ತಾರೆ. ಈ ಆಹಾರ ಶೈಲಿಗೆ ವಿದೇಶಿಗರೂ ಫಿದಾ ಆಗಿದ್ದಾರೆ.

Video: These farmer-chefs, well-known on YouTube, make 1000 pani puris in Tamil Nadu villageರಾಹುಲ್ ಗಾಂಧಿ ಮಹಿಮೆ
ವಾರಕ್ಕೆ ಹತ್ತು ಸಾವಿರ ಸಬ್ಸ್‌ಕ್ರೈಬರ‍್ಸ್ ಪಡೆಯುತ್ತಿದ್ದ ಇವರ ಲಕ್ ಬದಲಾಯಿಸಿದ್ದು ರಾಹುಲ್ ಗಾಂಧಿ.
ಹೌದು ಚುನಾವಣಾ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಅವರು ತಮಿಳುನಾಡಿಗೆ ಬಂದಿದ್ದು, ಕುಕ್ಕಿಂಗ್ ಬಾಯ್ಸ್‌ನನ್ನು ಭೇಟಿ ಮಾಡಿದ್ದಾರೆ. ಇದಾದ ನಂತರ ಯೂಟ್ಯೂಬ್ ಫಾಲೋವರ‍್ಸ್ ಗಗನಕ್ಕೇರಿದ್ದಾರೆ. ವಾರಕ್ಕೆ 40-50 ಸಾವಿರ ಮಂದಿ ಸಬ್ಸ್‌ಕ್ರೈಬ್ ಆಗುತ್ತಿದ್ದಾರೆ.

Village Cooking Channel gives Rs 10 lakh for Corona relief fund | முதல்வர் நிவாரண நிதிக்கு ரூ 10 லட்சம் கொடுத்த Village Cooking Channel - Oneindia Tamilಇಷ್ಟೊಂದು ದುಡ್ಡಾ?
ತಿಂಗಳಿಗೆ 10 ಲಕ್ಷ ಯೂಟ್ಯೂಬ್‌ನಿಂದ ದುಡಿದರೆ ಎರಡು ಲಕ್ಷ ಫೇಸ್‌ಬುಕ್‌ನಿಂದ ದುಡಿಯುತ್ತಾರೆ. ಸಿಕ್ಕಾಪಟ್ಟೆ ಆಹಾರ ತಯಾರಿಸಿ, ಶೋ ಮುಗಿದ ನಂತರ ಆಹಾರವನ್ನು ಬಡವರಿಗೆ ಹಂಚುತ್ತಾರೆ.
ಯಾವುದೇ ಹಳ್ಳಿಯಲ್ಲಿ ಕುಳಿತು ಯೂಟ್ಯೂಬ್ ಮೂಲಕ ದೇಶ-ವಿದೇಶಕ್ಕೆ ಪರಿಚಿತರಾದ ಇವರ ಐಡಿಯಾ ಮೆಚ್ಚಬೇಕಾದ್ದೆ!

VILLAGE DONUT !!! Tamil Traditional Snacks Ulunthu Vadai | Cooking Crispy Medu Vada Recipe - YouTube

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss