ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿದ ಗ್ರಾಪಂ ಸಿಬ್ಬಂದಿ: ಗ್ರಾಮಸ್ಥರಿಂದ ಆಕ್ರೋಶ

ಹೊಸದಿಗಂತ ವರದಿ ಹಾವೇರಿ:

ಜಿಲ್ಲೆಯ ಸವಣೂರು ತಾಲೂಕು ಯಲವಿಗಿ ಗ್ರಾಮ ಪಂಚಾಯತಿಯಲ್ಲಿ 74ನೇ ಭಾರತ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣವನ್ನು ಉಲ್ಟಾ ಹಾರಿಸಿರುವ ಘಟನೆ ನಡೆದಿದೆ. ಗ್ರಾಪಂ ಸಿಬ್ಬಂದಿ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿದಾಗ ರಾಷ್ಟ್ರ ಧ್ವಜ ಕೇಸರಿ ಬಿಳಿ ಹಸಿರು ಬದಲಿಗೆ ಹಸಿರು ಬಿಳಿ ಹಾಗೂ ಕೇಸರಿ ಬಣ್ಣಗಳಲ್ಲಿ ಹಾರಿದ್ದು ಕಂಡುಬಂದಿದೆ.

ಧ್ವಜ ಬಾನಂಗಳಲ್ಲಿ ಹಾರಾಡುವ ಸಂದರ್ಭದಲ್ಲಿ ಧ್ವಜ ಉಲ್ಟಾ ಹಾರಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಗ್ರಾ.ಪಂ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಆಗ ತಕ್ಷಣ ಉಲ್ಟಾ ಆಗಿ ಹಾರಾಡುತ್ತಿದ್ದ ಧ್ವಜವನ್ನು ಕೆಳಗೆ ಇಳಿಸಿ ಮತ್ತೆ ಸರಿಪಡಿಸಿ ದ್ವಜಾರೋಹಣ ಮಾಡಿದ್ದಾರೆ.
ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಪ್ಪಿತಸ್ತ ಗ್ರಾಪಂ ಸಿಬ್ಬಂದಿ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಕೆಲ ಸಿಬ್ಬಂದಿಯನ್ನು ಗ್ರಾಪಂ ಕೊಠಡಿಯಲ್ಲಿ ಕೂಡಿ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ವಿಷಯ ತಿಳಿದ ಸವಣೂರು ತಾ.ಪಂ ಇಓ ನವೀನ್‌ಪ್ರಸಾದ್ ಕಟ್ಟಿಮನಿ ಹಾಗೂ ಪಿಎಸ್‌ಐ ಸಂಗನಗೌಡ ಪೊಲೀಸ್‌ಗೌಡ್ರ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಚರ್ಚಿಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಇಲಾಖೆ ವತಿಯಿಂದ ಮೂರು ತಿಂಗಳ ಅಮಾನತು ಮಾಡಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!