ಅಸುನೀಗಿದ ವಾನರಗೆ ಅಂತ್ಯಕ್ರಿಯೆ ನೆರವೇರಿಸಿ ಕಣ್ಣೀರ ವಿದಾಯ ಹೇಳಿದ ಗ್ರಾಮಸ್ಥರು!

ಹೊಸದಿಗಂತ ವರದಿ,ಕಲಬುರಗಿ:

ವಿದ್ಯುತ್ ಸ್ಪಶ೯ದಿಂದ ಮಂಗನ ಸಾವಾಗಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಅಳ್ಳಗಿ ಬಿ ಗ್ರಾಮದಲ್ಲಿ ನಡೆದಿದ್ದು,ಗ್ರಾಮಸ್ಥರು ಸೇರಿ ಮಂಗನ ಅಂತ್ಯಕ್ರಿಯೆ ವಿಧಿವಿಧಾನಗಳು ನೆರವೇರಿಸಿದರು.

ಶನಿವಾರ ವಿದ್ಯುತ್ ಸ್ಪಶ೯ದಿಂದ ಮಂಗನ ಸಾವಿಗೆ,ಇಡೀ ಗ್ರಾಮವೇ ಕಣ್ಣಿರು ಇಟ್ಟಿದೆ.ವಿದ್ಯುತ್ ಸ್ಪಶ೯ದ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಒಯದಿದ್ದರು,ಫಲಕಾರಿಯಾಗದೆ ಮಂಗ ಸಾವನ್ನಪ್ಪಿದೆ.

ಗ್ರಾಮಸ್ಥಲೆಲ್ಲರೂ ಸೇರಿ ಗೂಡ್ಸ್ ವಾಹನಕ್ಕೆ ಹೂಗಳಿಂದ ಅಲಂಕಾರ ಮಾಡಿ,ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗನ ಅಂತಿವ ಯಾತ್ರೆಯನ್ನು ಮಾಡಿ,ತದನಂತರ ಅಂತ್ಯಕ್ರಿಯೆ ಮುಗಿಸಿದ್ದಾರೆ.

ಗ್ರಾಮದ ಶಾಂತಲಿಂಗೇಶ್ವರ ಮಠದ ಆವರಣದಲ್ಲಿ ಮಂಗನ ಅಂತ್ಯಕ್ರಿಯೆ ಆಗಿದ್ದು,ಮಂಗನ ಸಾವಿನ ಸುದ್ದಿ ಕೇಳಿ,ಇಡೀ ಗ್ರಾಮವೇ ಕಣ್ಣಿರು ಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!