ವಿನೇಶ್ ಫೋಗಟ್ ಅನರ್ಹ: ಕ್ರೀಡಾ ನ್ಯಾಯ ಮಂಡಳಿಯಿಂದ ಅಧಿಕೃತ ಹೇಳಿಕೆ ಬಿಡುಗಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್; 

ಕುಸ್ತಿಪಟು ವಿನೇಶ್ ಫೋಗಟ್ ಅವರ ತೂಕ ಅನರ್ಹ ಪ್ರಕರಣದ ಕುರಿತಂತೆ ಜಾಗತಿಕ ಕ್ರೀಡಾ ಮೇಲ್ಮನವಿ ನ್ಯಾಯಾಲಯ ಮಹತ್ವದ ಪ್ರಕಟಣೆ ಹೊರಡಿಸಿದೆ. ಪ್ಯಾರಿಸ್ ಒಲಿಂಪಿಕ್ಸ್ ಮುಗಿಯುವುದರೊಳಗಾಗಿ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದೆ.

ವಿನೇಶ್ ಫೋಗಟ್ ಮಹಿಳೆಯ 50 ಕೆ.ಜಿ. ಪ್ರಿಸ್ಟೈಲ್ ಕುಸ್ತಿ ಪಂದ್ಯದಲ್ಲಿ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ತೂಕ ಪರೀಕ್ಷೆ ವೇಳೆ ಅವರ ತೂಕ ಕೇವಲ 100 ಗ್ರಾಮ್ ಹೆಚ್ಚಳವಾಗಿರುವುದು ಕಂಡು ಬಂದಿತ್ತು. ಹೀಗಾಗಿ ಆಯೋಜಕರು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ್ದರು.

ಇದರ ಬೆನ್ನಲ್ಲೇ ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ವಿನೇಶ್‌ ಫೋಗಟ್‌ ಜಾಗತಿಕ ಕ್ರೀಡಾ ಮೇಲ್ಮನವಿ ನ್ಯಾಯಾಲಯ(ಸಿಎಎಸ್‌)ದ ಮೆಟ್ಟಿಲೇರಿದ್ದರು. ಈ ಬಗ್ಗೆ ಅವರು ಬುಧವಾರ ಸಂಜೆ ಸಿಎಎಸ್‌ಗೆ ಮೇಲ್‌ ಸಂದೇಶ ಕಳುಹಿಸಿದ್ದರು. ‘50 ಕೆ.ಜಿ. ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದು, ಬೆಳ್ಳಿ ಪದಕವನ್ನು ತಮಗೆ ನೀಡಬೇಕು’ ಎಂದು ಮನವಿ ಮಾಡಿದ್ದರು. ವಿನೇಶ್ ಫೋಗಟ್ ಅವರ ಮನವಿಯನ್ನು ಸ್ವೀಕರಿಸಿದ್ದ ಸಿಎಎಸ್‌ ಈ ಕುರಿತಂತೆ ವಾದ-ಪ್ರತಿವಾದವನ್ನು ಆಲಿಸಿ ಇಂದು ತೀರ್ಪು ನೀಡುವುದಾಗಿ ಘೋಷಿಸಿತ್ತು.

ಇದೀಗ ಆಗಸ್ಟ್ 11ರಂದು ಪ್ಯಾರಿಸ್ ಒಲಿಂಪಿಕ್ಸ್‌ ಮುಕ್ತಾಯವಾಗಲಿದ್ದು, ಒಲಿಂಪಿಕ್ ಕೂಟ ಮುಗಿಯುವ ಮುನ್ನವೇ ಫೋಗಟ್‌ಗೆ ಜಂಟಿ ಬೆಳ್ಳಿ ಪದಕ ನೀಡುವ ಬಗ್ಗೆ ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!