ಸೈಟ್ ವಾಪಸ್ ಪಡೆದು ಕೋರ್ಟ್ ಆದೇಶ ಉಲ್ಲಂಘನೆ: ಮುಡಾ ಆಯುಕ್ತರ ಬಂಧನಕ್ಕೆ ಎಚ್‌ಡಿಕೆ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸೈಟ್​ ವಾಪಸ್ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಮುಡಾ ಆಯುಕ್ತರ ಮೇಲೆ ಯಾರು ಪ್ರಭಾವ ಬೀರಿದ್ದಾರೆ ಅಂತಾ ಗೊತ್ತಾಗ್ಬೇಕಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಮುಡಾ 14 ಸೈಟ್​ಗಳ ಖಾತೆ ರದ್ದು ಮತ್ತು ಸಿಎಂ ಸಿದ್ದರಾಮಯ್ಯ ಪಾರ್ವತಿ ಹೆಸರಿನಲ್ಲಿದ್ದ ಸೈಟ್​ಗಳು ಮುಡಾ ಪಾಲಾಗಿದ್ದರಿಂದ ಮುಡಾ ಹಗರಣಕ್ಕೆ ದೊಡ್ಡ ತಿರುವು ದೊರೆತಿದೆ. ಮಂಗಳವಾರ ಖುದ್ದು ಸಿಎಂ ಸಿದ್ದರಾಮಯ್ಯರ ಪತ್ನಿಯೇ ಮುಡಾ ಕಚೇರಿಗೆ ಬಂದು ಸೈಟ್ ವಾಪಸ್​ ಕೊಡೋದಾಗಿ ಹೇಳಿದ್ದರು. ಇದಾಗ್ತಿದ್ದಂತೆಯೇ ತಕ್ಷಣವೇ ಸಿಎಂ ಪತ್ನಿಯ ಹೆಸರಿನಲ್ಲಿದ್ದ ಸೈಟ್​ಗಳು ಮುಡಾ ಪಾಲಾಗಿದೆ. 14 ಸೈಟ್​ಗಳ ಕ್ರಮಪತ್ರ ರದ್ದಾಗಿದೆ ಎಂದು ಮುಡಾ ಆಯುಕ್ತರೇ ಹೇಳಿಕೆ ಕೊಟ್ಟಿದ್ದಾರೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!