ಹೊಸದಿಗಂತ ಆನ್ ಲೈನ್ ಡೆಸ್ಕ್:
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನೋಟಿಸ್ ನೀಡಿದೆ.
ಏಪ್ರಿಲ್ 3 ರಂದು ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ಮಮತಾ ಅವರು ಚುನಾವಣಾ ಪ್ರಚಾರ ಮಾಡುವಾಗ, ಮುಸ್ಲಿಂರ ಮತ ವಿಭಜನೆ ಆಗಬಾರದು. ಒಗ್ಗಟ್ಟಾಗಿ ಟಿಎಂಸಿಗೆ ಮತ ನೀಡಬೇಕು ಎಂದು ಹೇಳಿ, ಧರ್ಮ, ಜಾತಿಯ ಆಧಾರದಲ್ಲಿ ಮತಯಾಚಿಸಿದ್ದರು. ಹೀಗಾಗಿ ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಆಯೋಗ ನೋಟಿಸ್ ನೀಡಿದೆ.
ನೋಟಿಸ್ಗೆ ಮೂರು ದಿನಗಳ ಒಳಗಾಗಿ ಉತ್ತರಿಸುವಂತೆ ಆಯೋಗ ಮಮತಾ ಅವರಿಗೆ ತಾಕೀತು ಮಾಡಿದೆ. ಇಲ್ಲದಿದ್ದರೇ ತಾವು ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.