ಹಿಂಸೆಯನ್ನೇ ನೆಚ್ಚಿಕೊಂಡ ಸಮಾಜಕ್ಕೆ ಭವಿಷ್ಯ ಇರದು: ಮೋಹನ್ ಭಾಗ್ವತ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಯಾವ ಸಮುದಾಯ, ಸಮಾಜ ಹಿಂಸೆಯನ್ನೇ ನೆಚ್ಚಿಕೊಳ್ಳುತ್ತದೋ ಅಂತಹ ಸಮಾಜ ತನ್ನ ಕೊನೆಯ ದಿನಗಳನ್ನೆಣಿಸುತ್ತಿದೆ ಎಂದೇ ಅರ್ಥ ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗ್ವತ್ ಹೇಳಿದ್ದಾರೆ.
ಪೂರ್ವ ಮಹಾರಾಷ್ಟ್ರದ ಭಂಕ್‌ಹೇಡ ಕನ್ವರ್ರ್‌ಮ್‌ಧಾಮ್‌ನಲ್ಲಿರುವ ಮಹಾನ್ ಸಂತ್ ಕನ್ವರ್ರಮ್ ಅವರ ಮೊಮ್ಮಗ ಸಾಯಿ ರಾಜೇಶ್‌ಲಾಲ್ ಮೊರ್ಡಿಯಾ ಅವರ ‘ಗದ್ದಿನಾಶಿನಿ’(ಧಾರ್ಮಿಕ ಪೀಠಾರೋಹಣ) ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಭಾಗ್ವತ್ ಹಿಂಸೆಯನ್ನು ಅವಲಂಭಿಸಿದ ಸಮಾಜಕ್ಕೆ ಭವಿಷ್ಯ ಇರಲು ಸಾಧ್ಯವೇ ಇಲ್ಲ ಎಂದರು. ಹಿಂಸೆ ಯಾರೊಬ್ಬನಿಗೂ ಒಳಿತುಂಟು ಮಾಡದು. ಎಲ್ಲ ಸಮುದಾಯಗಳನ್ನೂ ಒಗ್ಗೂಡಿಸಿ ಮಾನವೀಯತೆಯನ್ನು ರಕ್ಷಿಸಬೇಕಾದ ಅಗತ್ಯವಿದ್ದು, ನಾವೆಲ್ಲ ಈ ನಿಟ್ಟಿನಲ್ಲಿ ಅಹಿಂಸೆ ಮತ್ತು ಶಾಂತಿಯನ್ನು ಪ್ರೀತಿಸಿ ಮಾನವೀಯತೆ ಉಳಿಸಲು ಆದ್ಯತೆಯಿಂದ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ದೇಶದ ೧೨ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮತಾಂಧ ಶಕ್ತಿಗಳು ಶ್ರೀರಾಮ ನವಮಿ ಮತ್ತು ಹನುಮಜ್ಜಯಂತಿ ಸಂದರ್ಭ ಹಿಂಸಾಚಾರವೆಸಗಿದ ಹಿನ್ನೆಲೆಯಲ್ಲಿ ಭಾಗ್ವತ್ ಅವರ ಹೇಳಿಕೆ ಮಹತ್ವ ಪಡೆದಿದೆ .
ಪ್ರತಿ ಭಾರತೀಯ ಭಾಷೆಗೂ ತನ್ನದೇ ಆದ ಮಹತ್ವ
ದೇಶದಲ್ಲಿ ಸಿಂಧು ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಸಿಂ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಬೇಕಾದ ಅಗತ್ಯವಿದೆ. ಭಾರತ ಬಹುಭಾಷೆಯ ದೇಶವಾಗಿದ್ದು, ಇಲ್ಲಿ ಪ್ರತಿಯೊಂದು ಭಾಷೆಗೂ ತನ್ನದೇ ಆದ ಮಹತ್ವವಿದೆ ಎಂದು ಭಾಗ್ವತ್ ಒತ್ತಿ ಹೇಳಿದರು. ಇತ್ತೀಚಿನ ದಿನಗಳಲ್ಲಿ ಭಾಷೆಯನ್ನು ರಾಷ್ಟ್ರೀಯ ಏಕತೆಗೆ ವಿರುದ್ಧವಾಗಿ ಮತ್ತು ಪ್ರಾದೇಶಿಕವಾದಿ ಸಂಕುಚಿತತನಕ್ಕೆ ಬಳಸಿಕೊಳ್ಳುವ ಸ್ವಾರ್ಥಿ ರಾಜಕೀಯ ಮತ್ತು ವಿಚ್ಛಿದ್ರಕಾರಿ ಶಕ್ತಿಗಳ ಹುನ್ನಾರದ ಹಿನ್ನೆಲೆಯಲ್ಲಿ ಭಾಗ್ವತ್ ಅವರ ಹೇಳಿಗೆ ಗಮನಾರ್ಹವಾಗಿದೆ.
ಈ ಸಮಾರಂಭದಲ್ಲಿ ಅಮರಾವತಿ ಮತ್ತು ದೇಶದ ವಿವಿಧ ಭಾಗಗಳಲ್ಲಿನ ಸಾವಿರಾರು ಸಿಂ ಸಮುದಾಯ ಸದಸ್ಯರು ಪಾಲ್ಗೊಂಡಿದ್ದರು.ಸಿಂ ಸಮುದಾಯ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವುದಕ್ಕಾಗಿ ಭಾಗ್ವತ್ ಶ್ಲಾಘನೆ ವ್ಯಕ್ತಪಡಿಸಿದರು. ಇಂದು ಸಿಂ ಸಮುದಾಯದ ಒಂದು ದೊಡ್ಡ ಭಾಗ ಪಾಕಿಸ್ತಾನದಲ್ಲಿದ್ದು, ಅಲ್ಲಿ ತಮ್ಮ ಧರ್ಮ, ಸಂಸ್ಕೃತಿಯನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತಿದ್ದು, ಅನೇಕರು ಧರ್ಮ ಉಳಿಸುವುದಕ್ಕಾಗಿ ತಮ್ಮ ಮನೆ ಮಠ ತೊರೆದು ಭಾರತಕ್ಕೆ ಬಂದಿದ್ದಾರೆ ಎಂದು ಅವರು ಉಲ್ಲೇಖಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!