Sunday, August 14, 2022

Latest Posts

ಫಿರೋಜಾಬಾದ್‌ನಲ್ಲಿ 12,000 ಮಂದಿಗೆ ವೈರಲ್ ಜ್ವರ: 114 ಮಂದಿ ಸಾವು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಫಿರೋಜಾಬಾದ್‌ನಲ್ಲಿ ಕನಿಷ್ಠ 12,000 ಮಂದಿಗೆ ವೈರಲ್ ಜ್ವರ ಬಾಧಿಸಿದೆ.
ಭಾನುವಾರ ವೈರಲ್ ಜ್ವರಕ್ಕೆ 88  ಮಕ್ಕಳು ಮೃತಪಟ್ಟಿದ್ದು, ಸಾವಿನ ಸಂಖ್ಯೆ 114ಕ್ಕೆ ಏರಿಕೆಯಾಗಿದೆ.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಕಾರ್ಯಪಡೆಯು ಡೆಂಗ್ಯೂ ಹರಡುವಿಕೆಯನ್ನು ಗುರುತಿಸಿತ್ತು. ನಿಂತ ನೀರನ್ನು ಖಾಲಿ ಮಾಡಲು, ಕಾಯಿಲೆ ನಿಯಂತ್ರಿಸಲು ಫಾಗಿಂಗ್ ಮತ್ತು ಸ್ವಚ್ಛತಾ ಕಾರ್ಯಕ್ರಮ ಮುಂದುವರಿದಿದೆ.
ಜಿಲ್ಲೆಯಲ್ಲಿ ಆಸ್ಪತ್ರೆಗಳ ಕೊರತೆ ಕಾಣುತ್ತಿದ್ದು, ಸೂಕ್ತ ಚಿಕಿತ್ಸೆ ಇಲ್ಲದೆ ಮಕ್ಕಳು ಮೃತಪಡುತ್ತಿದ್ದಾರೆ.
ಈ ಬಗ್ಗೆ ಮಗು ಕಳೆದುಕೊಂಡ ವೀರ್‌ಪಾಲ್ ಎಂಬ ಪಾಲಕರೊಬ್ಬರು ಮಾತನಾಡಿದ್ದು, ನಾನು ಹಣದ ವ್ಯವಸ್ಥೆ ಮಾಡುತ್ತೇನೆ. ನೀವು ದಯವಿಟ್ಟು ಟ್ರೀಟ್‌ಮೆಂಟ್ ಶುರು ಮಾಡಿ ಎಂದು ಮನವಿ ಮಾಡಿದೆ. ಆದರೆ ಅವರು ನಿರಾಕರಿಸಿದರು. ನಂತರ ವೈದ್ಯಕೀಯ ಕಾಲೇಜಿಗೆ ಮಗುವನ್ನು ಕರೆದುಕೊಂಡು ಹೋದೆ. ಅಲ್ಲಿ ಬೆಡ್‌ಗಳು ಇರಲಿಲ್ಲ. ಆಗ್ರಾಕ್ಕೆ ಕರೆದೊಯ್ಯಲು ಟ್ಯಾಕ್ಸಿ ವ್ಯವಸ್ಥೆ ಮಾಡಿಕೊಂಡು ಹೊರಟೆ ಆದರೆ ಮಾರ್ಗಮಧ್ಯೆ ಮಗ ಮೃತಪಟ್ಟಿದ್ದಾನೆ ಎಂದು ಕಣ್ಣೀರಿಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss