Thursday, August 11, 2022

Latest Posts

ಈತನ ಬಾಯಲ್ಲಿ ಕಡುಬು ತುಂಬಿರೋದಲ್ಲ, ಇಲ್ಲಿದೆ ಬರೋಬ್ಬರಿ 82 ಹಲ್ಲು!!

 ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸಾಮಾನ್ಯವಾಗಿ ವಯಸ್ಕರಲ್ಲಿ 32 ಹಲ್ಲುಗಳಿರುತ್ತವೆ. ಎಲ್ಲೋ ಅಪರೂಪದ ಪ್ರಕರಣಗಳಲ್ಲಿ 35 ಹಲ್ಲುಗಳಿರುವ ಬಗ್ಗೆಯೂ ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಬಿಹಾರದ ಹದಿಹರೆಯದ ಯುವಕ 82 ಹಲ್ಲುಗಳನ್ನು ಹೊಂದಿದ್ದಾನೆ.

ಹೌದು.. ಆಶ್ಚರ್ಯವೆನಿಸಿದರೂ ಇದು ನಿಜ. ಇದು 17 ವರ್ಷದ ಬಿಹಾರದ ನಿತೀಶ್ ಕುಮಾರ್  ಕಥೆ. ಈತ ಅಪರೂಪದ ಗೆಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದ. 82 ಹಲ್ಲುಗಳಿಂದ ವಿಪರೀತ ನೋವು, ಕಿರಿಕಿರಿ ಅನುಭವಿಸುತ್ತಿದ್ದ. ಆದರೆ ಈಗ ನೋವಿನಿಂದ ಇವರಿಗೆ ಮುಕ್ತಿ ಸಿಕ್ಕಿದೆ. 3 ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ವೈದ್ಯರು 82 ಹಲ್ಲುಗಳನ್ನು ಹೊರತೆಗೆದಿದ್ದಾರೆ.

ನಿತೀಶ್ ಕಳೆದ 5 ವರ್ಷಗಳಿಂದ ದವಡೆಯ ಗೆಡ್ಡೆಯಾದ ಒಡೊಂಟೊಮಾದಿಂದ ಬಳಲುತ್ತಿದ್ದರು. ಆದರೆ ಸೂಕ್ತ ಪರಿಹಾರ ಸಿಕ್ಕಿರಲಿಲ್ಲ. ಈ ಸಮಸ್ಯೆಯಿಂದ ಇವರಿಗೆ ದವಡೆಯನ್ನು ಅಲುಗಾಡಿಲು ಸಾಧ್ಯವಾಗುತ್ತಿರಲಿಲ್ಲ. ನಂತರ ಇವರು ಬಿಹಾರದ ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರನ್ನು ಸಂಪರ್ಕಿಸಿದರು. ಇಲ್ಲಿನ ತಜ್ಞ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ  82 ಹಲ್ಲುಗಳನ್ನು ಹೊರತೆಗೆದಿದ್ದಾರೆ.

ಹೆಚ್ಚುವರಿ ಹಲ್ಲುಗಳಿಂದಾಗಿ ನಿತೇಶ್ ನ ಮುಖ ವಿರೂಪಗೊಂಡಿತ್ತು. ಡವಡೆಯ ಕೆಳಗೆ ಹಲ್ಲುಗಳು ಉಂಡೆಯಂತಾಗಿರುವುದು ಸ್ಕ್ಯಾನಿಂಗ್ ನಲ್ಲಿ ಕಂಡು ಬಂತು.  ಡಾ. ಪ್ರಿಯಾಂಕರ್ ಸಿಂಗ್ ಹಾಗೂ ಡಾ.ಜಾವೇದ್ ಇಕ್ಬಾಲ್ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ, ಕೊನೆಗೂ ನಿತೀಶ್ ನನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss