SHOCKING VIDEO| ಮದುವೆ ಮಂಟಪದಲ್ಲಿ ವಧುವಿನ ಹುಚ್ಚಾಟ:‌ ಬಂಧುಗಳು ಕಕ್ಕಾಬಿಕ್ಕಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳಲ್ಲಿ ವಧು-ವರರು ಮಾಡುವ ಮೋಜಿನ ವಿಷಯಗಳು ಹೆಚ್ಚು ವೈರಲ್‌ ಆಗುತ್ತಿವೆ. ಇದು ಪಬ್ಲಿಸಿಟಿ ಸ್ಟಂಟ್ ಆಗಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಕೆಲವೊಮ್ಮೆ ಮದುವೆ ಸಮಾರಂಭದಲ್ಲಿ ನವದಂಪತಿ ಮಾಡಿದ ಕೆಲಸಗಳು ವಿವಾದಕ್ಕೀಡಾಗುತ್ತವೆ. ಇದೀಗ ಮದುವೆ ಮಂಟಪದಲ್ಲಿಯೇ ಮದುಮಗಳು ಬಂದೂಕಿನಿಂದ ಗುಂಡು ಹಾರಿಸಿದ್ದರಿಂದ ಬಂಧುಗಳು ಕಕ್ಕಾಬಿಕ್ಕಿಯಾದರು.

ಉತ್ತರ ಪ್ರದೇಶದ ಹತ್ರಾಸ್‌ನ ಸೇಲಂಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವಧು ಮದುವೆ ಮಂಟಪದಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿದ್ದಾಳೆ. ಬಳಿಕ ಆಕೆ ಬಂದೂಕನ್ನು ತನ್ನ ಸಂಬಂಧಿಗೆ ಕೊಟ್ಟಿದ್ದಾಳೆ.

ವಧು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾಗ ಪಕ್ಕದಲ್ಲಿದ್ದವರು ವಿಡಿಯೋ ಶೂಟ್ ಮಾಡಿದ್ದಾರೆ. ಚಿತ್ರೀಕರಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಷಯ ಪೊಲೀಸರಿಗೆ ತಲುಪಿತ್ತು. ವಿಡಿಯೋ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!