ಮರಿಯಾನೆಗೆ ಝಡ್‌ ಪ್ಲಸ್‌ ಭದ್ರತೆ, ಯಾರು ಕೆಮ್ಮಂಗಿಲ್ಲಾ ಗುರು..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಝಡ್‌ ಪ್ಲಸ್‌ ಭದ್ರತೆ ಕೇವಲ ಮನುಷ್ಯರಿಗೆ ಮಾತ್ರಾನಾ ಇರೋದು ಪ್ರಾಣಿಗಳಿಗೂ ಇದೇ ಕಣ್ರೀ.. ಒಂದು ಪುಟ್ಟ ಮರಿಯಾನೆ ಸುತ್ತಲೂ ದೊಡ್ಡ ಆನೆ ಹಿಂಡೇ ಬರುತ್ತಿದೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಪೋಸ್ಟ್ ಮಾಡಿದ್ದು, ಈ ಭದ್ರತೆ ಸಾಮಾನ್ಯ ಭದ್ರತೆಯಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನ ಸತ್ಯಮಂಗಲದಲ್ಲಿ ಈ ಘಟನೆ ನಡೆದಿದೆ. ಮರಿಯಾನೆಯನ್ನು ರಸ್ತೆಯಿಂದ ಸೇಫಾಗಿ ಕರೆದೊಯ್ಯಲು ಅದಕ್ಕೆ ಯಾವುದೇ ಹಾನಿಯಾಗದಂತೆ ಸುತ್ತುವರಿದಿವೆ. ಪುಟ್ಟ ಆನೆಯನ್ನು ಮಧ್ಯದಲ್ಲಿ ಇರಿಸಿ ಅತ್ಯಂತ ಸುಭದ್ರವಾಗಿ ಕರೆದೊಯ್ದಿವೆ.  ಇಷ್ಟೊಂದು ಬಿಗಿ ಭದ್ರತೆಯನ್ನು ಜಗತ್ತಿನಲ್ಲಿ ಯಾರೂ ನೀಡಲಾರರು ಎಂದು ಅಧಿಕಾರಿ ಶೀರ್ಷಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!