ಕುದುರೆ ಮೇಲೇರಿ ಫುಡ್‌ ಡೆಲಿವರಿ ಮಾಡಿದ ಯುವಕ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿನ ದಿನಗಳಲ್ಲಿ ಎಲ್ಲಾ ಸರಕು ಸೇವೆಗಳು ನೇರವಾಗಿ ಮನೆ ಬಾಗಿಲಿಗೇ ಬಂದು ತಲುಪುತ್ತವೆ. ಅದರಲ್ಲಿ ಆಹಾರ ಕೂಡ ಒಂದು. ಹಸಿವಾದರೆ ಅಡುಗೆ ಮಾಡುವ ಅವಶ್ಯಕತೆಯಿಲ್ಲ. ನಿಮಗಿಷ್ವಾದ ಆಹಾರವನ್ನು ನಿಮಗಿಷ್ಟವಾದ ರೆಸ್ಟೋರೆಂಟ್‌ನಿಂದ ತರಿಸಿಕೊಳ್ಳಬಹುದು. ಇವುಗಳನ್ನು ತಲುಪಿಸಲು ಫುಡ್‌ ಡೆಲಿವರಿ ಬಾಯ್ಸ್‌ ಇದಾರೆ. ಮಹಾನಗರಗಳಲ್ಲಿ ಎಷ್ಟೇ ಟ್ರಾಫಿಕ್‌, ಜೋರು ಮಳೆ ಇದ್ದರೂ ಸಹ ಸಮಯಕ್ಕನುಗುಣವಾಗಿ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಾರೆ.

ಇಂಥದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್‌ ಆಗಿದೆ. ಫುಡ್‌ ಡೆಲಿವರಿ ಮಾಡೋದು ವಿಶೇಷವೇನಲ್ಲ, ಆದರೆ ಈ ಯುವಕ ಬಳಸಿರುವ ವಾಹನ ಬೈಕ್‌, ಕಾರು, ಸೈಕಲ್‌ ಯಾವುದೂ ಅಲ್ಲ ಬದಲಿಗೆ ಕುದುರೆ. ಮುಂಬೈನಂತಹ ಮಹಾನಗರದಲ್ಲಿ ಭಾರೀ ಮಳೆಯ ನಡುವೆಯೂ ಯುವಕನೊಬ್ಬ ಕುದುರೆಯೇರಿ ಫುಡ್‌ ಡೆಲಿವರಿ ಮಾಡಲು ಹೊರಟ್ಟಿದ್ದಾನೆ.

ಈ ಘಟನೆಯನ್ನು ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ಸ್ವಿಗ್ಗಿ ಬಾಯ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!