ವೈರಲ್‌ ವಿಡಿಯೋ| ವೇಗವಾಗಿ ಬಂದ ಟ್ರಕ್‌ ಟೈರ್‌ ಡಿಕ್ಕಿ ಆಟೋ ಡ್ರೈವರ್‌ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟ್ರಕ್‌ ಟೈರ್‌ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಚಲಿಸುತ್ತಿದ್ದ ಟ್ರಕ್‌ನಿಂದ ಟೈರ್‌ ಬೇರ್ಪಟ್ಟು, ರಸ್ತೆ ಬದಿ ನಿಂತಿದ್ದ 45 ವರ್ಷದ ಆಟೋ ಚಾಲಕನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಚಾಲಕ ಕೆಲ ಮೀಟರ್ ದೂರದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ತಿಳಿಸಿದ್ದಾರೆ.

ಮೃತರನ್ನು ಮುರಳಿ ಎಂದು ಗುರುತಿಸಲಾಗಿದ್ದು, ಇವರು ಶ್ರೀಪೆರಂಬದೂರು ಪ್ರದೇಶದಲ್ಲಿ ಆಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ದಿನಸಿ ಖರೀದಿಸಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಟೈರ್ ಬಡಿದ ನಂತರ ಪಾದಚಾರಿಗಳು ತಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಮುರಳಿಯನ್ನು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.

ದುರದೃಷ್ಟವಶಾತ್ ಮುರಳಿ ಅಷ್ಟರಲ್ಲಾಗಲೇ ಮೃತಪಟ್ಟಿದ್ದ. ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪಕ್ಕದಲ್ಲಿದ್ದ ಮೂವರು ಬಚಾವಾಗಿದ್ದಾರೆ. ಮುರುಳಿ ರಸ್ತೆಯಲ್ಲಿ ತೆರಳುವಾಗ ಮತ್ತೊಬ್ಬ ವ್ಯಕ್ತಿ ಅದೇ ವೇಳೆಗೆ ರಸ್ತೆ ದಾಟಿದ್ದಾರೆ. ಆವ್ಯಕ್ತಿ ಅದೃಷ್ಟವಶಾತ್‌ ಪಾರಾಗಿದ್ದಾರೆ. ಪೊಲೀಸರು ಟ್ರಕ್ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!