Wednesday, June 7, 2023

Latest Posts

SHOCKING VIDEO| ಮನೆಗಳಿಗೆ ಲಾಕ್‌ ಹಾಕ್ತಾರೆ, ಬೈಕ್‌ ಕದ್ದು ಪರಾರಿಯಾಗ್ತಾರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳ್ಳರು ಬಂದು ಕ್ಷಣಾರ್ಧದಲ್ಲಿ ಬೈಕ್‌ಗಳನ್ನು ಕದ್ದೊಯ್ಯುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮಧ್ಯಪ್ರದೇಶದ ಉಜ್ಜಯಿನಿಯ ರಸ್ತೆಯೊಂದರಲ್ಲಿ ಮನೆಗಳ ಮುಂದೆ ಸಾಲಾಗಿ ನಿಲ್ಲಿಸಿದ್ದ ಬೈಕ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ. ಮೊದಲು ಮನೆಗಳ ಹೊರಗಿನಿಂದ ಬಾಗಿಲಿನ ಚಿಲಕ ಹಾಕುತ್ತಾರೆ. ಮಾಲೀಕರು ಕಂಡರೂ ಆಚೆ ಬರದಂತೆ ತಡೆಯಲು ಅತ್ಯಂತ ಚಾಣಾಕ್ಷದಿಂದ ಬೈಕ್‌ಗಳನ್ನು ಎಗರಿಸಿದ್ದಾರೆ.

ಈ ದರೋಡೆಯ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಈಗ ಅಲ್ಲಿನ ಸ್ಥಳೀಯರಿಗೆ ಕಳ್ಳರ ಭಯ ಶುರುವಾಗಿದೆ. ಬೀಗ ಹಾಕಿದ್ದರೂ, ಅತ್ಯಂತ ಚಾಕಚಕ್ಯತೆಯಿಂದ ಹ್ಯಾಂಡಲ್ ಲಾಕ್ ಗಳನ್ನು ಮುರಿದು ಬೈಕ್ ಗಳನ್ನು ಕದಿಯುವ ರೀತಿ ಹೇಳತೀರದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಳ್ಳರ ಬುದ್ದಿವಂತಿಕೆಗೆ ಬೆಚ್ಚಿ ಬಿದ್ದಿದ್ದಾರೆ. ಇಂತಹ ಕಳ್ಳತನಗಳನ್ನು ತಡೆಯಬೇಕಾದರೆ ಕೇವಲ ಬೈಕ್ ಗಳ ಹ್ಯಾಂಡಲ್ ಲಾಕ್ ಮಾಡಿದರೆ ಸಾಲದು, ಹೆಚ್ಚುವರಿ ಭದ್ರತಾ ವ್ಯವಸ್ಥೆ ಅಗತ್ಯ ಎಂಬುದು ಹಲವರ ಅಭಿಪ್ರಾಯ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!