ರಸ್ತೆಯಲ್ಲಿ ಕಾರಿನ ಡೋರ್‌ ತೆರೆಯೋ ಮುನ್ನ ಎಚ್ಚರ:ಹಿಂದಿನಿಂದ ಬಂದ ಸ್ಕೂಟರ್‌ ಡಿಕ್ಕಿ ಹೊಡೆದ ಭಯಾನಕ ವಿಡಿಯೋ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಸ್ತೆ ಬದಿ ಕಾರು ನಿಲ್ಲಿಸಿ ಕಾರಿನ ಬಾಗಿಲು ತೆಗೆಯುವಾಗ ಎಚ್ಚರದಿಂದಿರಿ. ಕಾರಿನ ಹಿಂದಿನಿಂದ ಯಾವುದೇ ವ್ಯಕ್ತಿ ಅಥವಾ ವಾಹನ ಬರುತ್ತಿಲ್ಲ ಎಂದು ಕಚಿತವಾದರಷ್ಟೇ ಬಾಗಿಲು ತೆರೆಯಿರಿ. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ.

ಇದರಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ವ್ಯಕ್ತಿ ಸರಿಯಾಗಿ ಗಮನಿಸದೇ ಕಾರಿನ ಡೋರ್‌ ತೆರೆದಿದ್ದಾರೆ. ಹಿಂದೆಯಿಂದ ಸ್ಕೂಟಿಯಲ್ಲಿ ಬಂದ ಮಹಿಳೆ ಕಾರಿನ ಡೋರ್‌ಗೆ ಡಿಕ್ಕಿ ಹೊಡೆದು ಮತ್ತೊಂದು ಕಾರಿನೆಡೆ ಸಿಲುಕಿದ್ದಾರೆ. ಈ ಗಟನೆ ಬೆಂಗಳೂರಿನಲ್ಲಿ ನಡೆದಿದ್ದು, ಜಾಗರೂಕೃಾಗಿರಿ ಎಂದು ಪ್ರಾಧಿಕಾರ ಟ್ವೀಟ್‌ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!