ವಿರಾಟ್ ಉತ್ತಮ ಲಯದಲ್ಲಿದ್ದಾನೆ: ಕೊಹ್ಲಿ ಪರ ಬ್ಯಾಟ್ ಬೀಸಿದ ರೋಹಿತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಯಕತ್ವದಿಂದ ಕೆಳಗಿದ ನಂತರ ವಿರಾಟ್​ ಕೊಹ್ಲಿ ಫಾರ್ಮ್ ನಲ್ಲಿ ಕೊಂಚ ಎಡವಿದ್ದು, ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಇದಕ್ಕೆ ಭಾರತ ತಂಡದ ನೂತನ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.
ವೆಸ್ಟ್​ ಇಂಡೀಸ್ ವಿರುದ್ಧದ ಟಿ20 ಸರಣಿಗೂ ಮುನ್ನ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ , ಇದೆಲ್ಲಾ ನಿಮ್ಮಿಂದ ಶುರುವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ ಮಾಧ್ಯಮ ಕೆಲವು ಸಮಯ ಸುಮ್ಮನಿದ್ದರೆ ಎಲ್ಲವೂ ಸರಿಯಾಗುತ್ತದೆ. ನಿಮ್ಮ ಕಡೆಯಿಂದ ಈ ಚರ್ಚೆ ನಿಂತರೆ ಎಲ್ಲವನ್ನು ಸರಿಪಡಿಸಿಕೊಳ್ಳಬಹುದು ಎಂದು ಹೇಳುವ ಮೂಲಕ ಕೊಹ್ಲಿ ಬೆನ್ನಿಗೆ ರೋಹಿತ್ ನಿಂತಿದ್ದಾರೆ.
ನನ್ನ ದೃಷ್ಠಿಯಲ್ಲಿ ವಿರಾಟ್ ಉತ್ತಮ ಲಯದಲ್ಲಿದ್ದಾನೆ. ಈಗಾಗಲೇ ದಶಕಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಆಟಗಾರನಾತ. ಒತ್ತಡದ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕು ಎಂದು ಚೆನ್ನಾಗಿ ಬಲ್ಲ. ಎಲ್ಲವೂ ನಿಮ್ಮಿಂದ ಆರಂಭವಾಗಿರುವುದು. ನೀವು ಸುಮ್ಮನಿದ್ದರೆ ಎಲ್ಲವೂ ಸರಿಯಾಗುತ್ತದೆ ವಿರಾಟ್ ಎಂದು ರೋಹಿತ್ ಶರ್ಮಾ ಬ್ಯಾಟ್ ಬೀಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!