ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಟಾಪ್ ಸ್ಕೋರರ್ ಆಗಿದ್ದಾರೆ. ಕಳೆದ ಸೆಮೀಸ್ ಪಂದ್ಯದಲ್ಲೇ ಸಚಿನ್ ತೆಂಡೂಲ್ಕರ್ (673) ಅವರ ದಾಖಲೆ ಮೀರಿಸಿದ ವಿರಾಟ್ 711 ರನ್ ಕಲೆಹಾಕಿದ್ದರು. ಇಂದು ಫೈನಲ್ನಲ್ಲಿ 711 ಕ್ಕೆ 54 ರನ್ ಸೇರಿಸಿದ ವಿರಾಟ್ ವಿಶ್ವಕಪ್‌ನಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ.
2023ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ 11 ಇನ್ನಿಂಗ್ಸ್ ಆಡಿದ್ದು 95.62ರ ಸರಾಸರಿಯಲ್ಲಿ 90.31 ಸ್ಟ್ರೈಕ್ರೇಟ್ನಿಂದ 765 ರನ್ ಕಲೆಹಾಕಿದ್ದಾರೆ. ವಿರಾಟ್ 3 ಶತಕ ಮತ್ತು 6 ಅರ್ಧಶತಕ ಗಳಿಸಿದ್ದಾರೆ. ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಯಾವುದೇ ಆಟಗಾರ ಗಳಿಸಿದ ಅತಿ ಹೆಚ್ಚು ರನ್ ಇದಾಗಿದೆ. ಸಚಿನ್ ದಾಖಲೆ ಮುರಿದ ವಿರಾಟ್ ಹೊಸ 765 ರನ್ಗಳ ಹೊಸ ಮೈಲಿಗಲ್ಲನ್ನು ರಚಿಸಿದ್ದಾರೆ.
ವಿಶ್ವಕಪ್ ಒಂದರಲ್ಲಿ ಐದು ಬಾರಿ ಸತತ 50+ ಸ್ಕೋರ್ ಮಾಡಿದ ಬ್ಯಾಟರ್ ವಿರಾಟ್ ಕೊಹ್ಲಿ ಆಗಿದ್ದಾರೆ. ಈ ರೀತಿ ವಿಶ್ವಕಪ್‌ನಲ್ಲಿ ಸ್ಕೋರ್ ಮಾಡಿದ ಮೂರನೇ ಬ್ಯಾಟರ್ ವಿರಾಟ್, ಆದರೆ ಎರಡು ಬಾರಿ ಕೊಹ್ಲಿಯೇ ಈ ದಾಖಲೆ ಮಾಡಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಸ್ಟೀವನ್ ಸ್ಮಿತ್, 2019 ಮತ್ತು 2023 ರಲ್ಲಿ ವಿರಾಟ್ 50+ ರನ್ ಗಳಿಸಿದ್ದಾರೆ.