ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ವಿರಾಟ್ ಕೊಹ್ಲಿ: ಅಚ್ಚರಿಗೊಂಡ ವಿದ್ಯಾರ್ಥಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶ ವಿಶ್ವದೆಲ್ಲೆಡೆ ಟೀಮ್​ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯ(Virat Kohli) ಸುದ್ದಿ ಸದಾ ಇರುತ್ತದೆ. ಆದ್ರೆ ಇದೀಗ ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲೂ ಮೂಡಿಬಂದಿದೆ.

ಹೌದು, 9ನೇ ತರಗತಿಯ ಇಂಗ್ಲಿಷ್​ ಪರೀಕ್ಷೆಯಲ್ಲಿ ವಿರಾಟ್​ ಕೊಹ್ಲಿಯ ಬಗ್ಗೆ 100 ರಿಂದ 150 ಪದಗಳ ಉತ್ತರ ಬರೆಯಿರಿ ಎಂಬ ಪ್ರಶ್ನೆ ಪತ್ರಿಕೆಯ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

2022ರಲ್ಲಿ ನಡೆದ ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿಯಲ್ಲಿ ಅಫಘಾನಿಸ್ತಾನ ವಿರುದ್ಧ ಶತಕ ಸಿಡಿಸುವ ಮೂಲಕ ಕೊಹ್ಲಿ ಬರೋಬ್ಬರಿ 3 ವರ್ಷಗಳ ಬಳಿಕ ಶತಕದ ಬರವನ್ನು ಪೂರ್ಣಗೊಳಿಸಿದರು. ಇದೀಗ ವಿರಾಟ್​ ಅವರು ಏಷ್ಯಾ ಕಪ್​ನಲ್ಲಿ ಬಾರಿಸಿದ ಶತಕದ ಬಗ್ಗೆ 9ನೇ ತರಗತಿ ಇಂಗ್ಲಿಷ್‌ ಪರೀಕ್ಷೆಯಲ್ಲಿ ಕೊಹ್ಲಿ ಫೋಟೊ ಕುರಿತು ಒಂದು ಪ್ರಶ್ನೆಯನ್ನು ಕೇಳಲಾಗಿದೆ.ಕೊಹ್ಲಿ ಪೋಟೊವನ್ನು ಬಿತ್ತರಿಸಿ, ಈ ಕೆಳಗಿನ ಚಿತ್ರದ ಬಗ್ಗೆ 100 ರಿಂದ 120 ಪದಗಳಲ್ಲಿ ಉತ್ತರಿಸಿ ಎಂಬ ಪ್ರಶ್ನೆ ಕೇಳಿದ್ದಾರೆ.

ಕೊಹ್ಲಿ ಪೋಟೊ ನೋಡಿದ ತಕ್ಷಣ ವಿದ್ಯಾರ್ಥಿಗಳು ಒಂದು ಕ್ಷಣ ಅಚ್ಚರಿ ಮತ್ತು ಸಂತಸಗೊಂಡಿದ್ದಾರೆ. ಕೆಲ ವಿದ್ಯಾರ್ಥಿಗಳು ಅಧ್ಯಾಪಕರ ಬಳಿ ಈ ಪ್ರಶ್ನೆ ನಿಜವಾಗಿಯೂ ಇದೆಯೇ ಎಂದು ಕೇಳಿದ್ದಾರೆ.

ಆದರೆ ಕ್ರಿಕೆಟ್​ ಬಗ್ಗೆ ತಿಳಿಯದೇ ಇರುವ ಕೆಲ ವಿದ್ಯಾರ್ಥಿಗಳು ಮಾತ್ರ ಈ ಪ್ರಶ್ನೆಯಿಂದ ಗೊಂದಲಕ್ಕೀಡಾದರು. ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡ ಅಫಘಾನಿಸ್ತಾನ ವಿರುದ್ಧ ಕೊನೆಯ ಪಂದ್ಯ ಆಡಿತ್ತು. ಈ ಪಂದ್ಯದಲ್ಲಿ ಕೊಹ್ಲಿ 61 ಎಸೆತಗಳಲ್ಲಿ ಬರೋಬ್ಬರಿ 122 ರನ್ ಬಾರಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!