Saturday, July 2, 2022

Latest Posts

ಫುಲ್ ಟ್ರೋಲ್ ಆಯ್ತು ವಿಕೆಟ್ ಕಳಕೊಂಡ ಕೋಹ್ಲಿ ರಿಯಾಕ್ಷನ್! ಆರ್’ಸಿಬಿ ಕ್ಯಾಪ್ಟನ್ ಮಾಡಿದ್ದೇನು?

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬುಧವಾರ ಸನ್ ರೈಸರ್ಸ್ ಹಾಗೂ ಆರ್ ಸಿಬಿ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ನಾಯಕ ವಿರಾಟ್ ಕೋಹ್ಲಿ ಔಟ್ ಆದ ಬಳಿಕ ಕುರ್ಚಿಯನ್ನು ಹೊಡೆದು ಬೇಸರ ಹೊರಹಾಕಿದ್ದಾರೆ.
ಹೌದು.. ನಿನ್ನೆ ರಾತ್ರಿ ಚೆನ್ನೈ’ನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಎಸೆತಕ್ಕೆ ಔಟ್ ಆಗಿದ್ದರು. ಈ ವೇಳೆ ಡಗೌಟ್ ನಲ್ಲಿ ಖಾಲಿಯಿದ್ದ ಕುರ್ಚಿಯೊಂದನ್ನು ಬ್ಯಾಟ್ ನಿಂದ ಹೊಡೆದುರುಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐಪಿಎಲ್ ನ 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ನಿಗದಿತ ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಗ್ಲೆನ್ ಮ್ಯಾಕ್ಸ್ ವೆಲ್ 41 ಎಸೆತಗಳಲ್ಲಿ 59 ರನ್ ಗಳಿಸಿದರೆ, ಕೋಹ್ಲಿ 29 ಎಸೆತಗಳಲ್ಲಿ 33 ರನ್ ಪಡೆದು ವಿಜಯ್ ಶಂಕರ್ ಗೆ ಕ್ಯಾಚ್ ನೀಡಿ ಔಟ್ ಆಗಿದ್ದರು.
ಆರ್’ಸಿಬಿ ಫ್ಯಾನ್ಸ್ ಈ ವಿಡಿಯೋ ನೋಡಿ ಕಣ್ಣೀರು ಹಾಕಿದ್ದರೆ ಮತ್ತೆ ಕೆಲವರು ಇದನ್ನು ಟ್ರೋಲ್ ಮಾಡಿದ್ದಾರೆ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss