Thursday, July 7, 2022

Latest Posts

ವಿರಾಟ್​​ ಕೊಹ್ಲಿ ಅದ್ಭುತ ನಾಯಕ: ಗುಣಗಾನ ಮಾಡಿದ ರಾಹುಲ್​ ದ್ರಾವಿಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಾಳೆಯಿಂದ ದಕ್ಷಿಣ ಆಫ್ರಿ- ಟೀಂ ಇಂಡಿಯಾ ನಡುವಿನ ಟೆಸ್ಟ್​ ಸರಣಿ ಆರಂಭವಾಗಲಿದು, ಎರಡು ತಂಡಗಳು ಎಲ್ಲ ರೀತಿಯಿಂದಲೂ ಸಜ್ಜಾಗಿದೆ.
ಏಕದಿನ ಹಾಗೂ ಟಿ-20 ಕ್ರಿಕೆಟ್​​ ನಾಯಕತ್ವ ತ್ಯಜಿಸಿರುವ ವಿರಾಟ್​​ ಕೊಹ್ಲಿಗೆ ಟೆಸ್ಟ್​ ತಂಡದ ಮುಂದಾಳತ್ವ ಇದ್ದು, , ಗೆಲುನಿನ ಹುಮಸ್ಸಿನಲ್ಲಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಟೀಂ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್, ವಿರಾಟ್​​ ಕೊಹ್ಲಿ ಅದ್ಭುತ ನಾಯಕ ಎಂದು ಗುಣಗಾನ ಮಾಡಿದ್ದಾರೆ. ಟೆಸ್ಟ್​ ಕ್ರಿಕೆಟ್​ ಹೆಚ್ಚಾಗಿ ಪ್ರೀತಿಸುವ ಪ್ಲೇಯರ್​​ಗಳಲ್ಲಿ ವಿರಾಟ್​​ ಕೂಡ ಒಬ್ಬರು. ದಕ್ಷಿಣ ಆಫ್ರಿಕಾದಲ್ಲಿ ನಾವು ಸುಧಾರಿಸಿಕೊಳ್ಳಬೇಕಾಗಿದ್ದು, ವಿರಾಟ್​​ ಅತಿದೊಡ್ಡ ಪಾತ್ರ ನಿರ್ವಹಿಸಲಿದ್ದಾರೆ ಎಂದರು.
ಭಾರತ ಈಗಾಗಲೇ ಆಸ್ಟ್ರೇಲಿಯಾ, ಇಂಗ್ಲೆಂಡ್​​ನಲ್ಲಿ ಯಶಸ್ಸು ಕಂಡಿದೆ. ತಂಡದಲ್ಲಿ ಆಯ್ಕೆಯಾಗಿರುವ ಪ್ರತಿಯೊಬ್ಬರಿಗೂ ಇದೊಂದು ದೊಡ್ಡ ಸವಾಲು ಮತ್ತು ಉತ್ತಮ ಅವಕಾಶವಾಗಿದೆ .
ಇತ್ತ ದಕ್ಷಿಣ ಆಫ್ರಿಕಾಗೆ ಹೋಲಿಕೆ ಮಾಡಿದಾಗ ನಮ್ಮ ಬೌಲಿಂಗ್​ ವಿಭಾಗ ಹೆಚ್ಚು ಅನುಭವ ಹೊಂದಿದೆ. ಖಂಡಿತವಾಗಿ ಸರಣಿಯಲ್ಲಿ ನಮ್ಮ ಸಹಾಯಕ್ಕೆ ಬರಲಿದೆ ಎಂದು ಕೋಚ್​​ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss