ವಿರಾಟ್ ಕೊಹ್ಲಿಯಿಂದ ರೊನಾಲ್ಡೊವರೆಗೆ: ಇನ್ಸ್ಟಾಗ್ರಾಮ್‌ ನಲ್ಲಿ ಅತಿ ಹೆಚ್ಚು ಗಳಿಸುವ ಕ್ರೀಡಾತಾರೆಯರು ಇವರೇ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್‌ ಮೂಲಕ ಅತಿ ಹೆಚ್ಚು ಗಳಿಕೆ ಮಾಡುವ ಭಾರತದಿಂದ ಕ್ರೀಡಾ ಸೆಲೆಬ್ರಿಟಿಯಾಗಿದ್ದಾರೆ ಎಂದು ಹಾಪರ್‌ ಎಚ್‌ಡಿ ವೆಬ್‌ಸೈಟ್‌ನ ವರದಿ ಮಾಡಿದೆ. ಕೊಹ್ಲಿ ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಬೋರೋಬ್ಬರಿ 8.9 ಕೋಟಿ ರೂ. ಗಳಿಕೆ ಮಾಡುತ್ತಾರೆ. ವಿರಾಟ್ ಕೊಹ್ಲಿಯಿಂದ ಹಿಡಿದು ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿಯವರೆಗೆ ಇನ್ಸ್ಟಾಗ್ರಾಮ್‌ ನಲ್ಲಿ ಅತಿಹೆಚ್ಚು ಗಳಿಸುವ ವಿಶ್ವದ ಕ್ರೀಡಾಪಟುಗಳ ವರದಿ ಇಲ್ಲಿದೆ.

ವಿರಾಟ್ ಕೊಹ್ಲಿ: 8.9 ಕೋಟಿ ರೂ.

ಇನ್‌ಸ್ಟಾಗ್ರಾಮ್‌ನಲ್ಲಿ 200 ಮಿಲಿಯನ್‌ಗಿಂತಲೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಪರ್‌ಎಚ್‌ಡಿ ವೆಬ್‌ಸೈಟ್ ಪ್ರಕಾರ ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಸುಮಾರು 8.9 ಕೋಟಿ ರೂ. ಗಳಿಸುತ್ತಾರೆ. ಜಾಗತಿಕವಾಗಿ ಅತಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ ಕ್ರೀಡಾಪಟುಗಳನ್ನು ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನಂತರ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವ್ಯಕ್ತಿ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ 1425 ಪೋಸ್ಟ್‌ಗಳನ್ನು ಮಾಡಿದ್ದಾರೆ. ಟ್ವಿಟರ್‌ ಮೂಲಕವೂ ಕೊಹ್ಲಿಗೆ ಭರ್ಜರಿ ಆದಾಯ ಬರುತ್ತಿದ್ದು, ಮೂಲಗಳ ಪ್ರಕಾರ ಪ್ರತಿ ಟ್ವಿಟರ್ ಪೋಸ್ಟ್‌ಗೆ ಕೊಹ್ಲಿ 5 ಕೋಟಿ ರುಪಾಯಿ ವರೆಗೆ ಆದಾಯ ಪಡೆಯುತ್ತಿದ್ದಾರೆ.

ಲೆಬ್ರಾನ್ ಜೇಮ್ಸ್ – 5.36 ಕೋಟಿ ರೂ.


ಅಮೆರಿಕದ ಎನ್‌ಬಿಎ ಸ್ಟಾರ್ ಲೆಬ್ರಾನ್ ಜೇಮ್ಸ್ ಪ್ರತಿ ಇನ್ಸ್ಟಾಗ್ರಾಮ್ ಪೋಸ್ಟ್‌ಗೆ ಸುಮಾರು 5.36 ಕೋಟಿ ರೂ. ಪಡೆಯುತ್ತಾರೆ. ಲೆಬ್ರಾನ್ 121 ಮಿಲಿಯನ್ Instagram ಅನುಯಾಯಿಗಳನ್ನು ಹೊಂದಿದ್ದಾರೆ. (ಮೂಲ: ಟ್ವಿಟರ್)

ನೇಮರ್ – 7.7 ಕೋಟಿ ರೂ.


ಬ್ರೆಜಿಲ್ ಮತ್ತು ಪಿಎಸ್‌ಜಿ ಫುಟ್‌ಬಾಲ್ ಸೂಪರ್‌ಸ್ಟಾರ್ ನೇಮರ್ ಜೂನಿಯರ್ ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಸುಮಾರು 7.7 ಕೋಟಿ ರೂ. ಪಡೆಯುತ್ತಾರೆ. ನೇಮಾರ್ 174 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. (ಮೂಲ: ಟ್ವಿಟರ್)

ಲಿಯೋನೆಲ್ ಮೆಸ್ಸಿ – 14 ಕೋಟಿ ರೂ.

ಅರ್ಜೆಂಟೀನಾ ಮತ್ತು ಪಿಎಸ್‌ಜಿ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ 14 ಕೋಟಿ ರೂ. ಮೆಸ್ಸಿ 327 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. (ಮೂಲ: ಟ್ವಿಟರ್)

ಕ್ರಿಸ್ಟಿಯಾನೊ ರೊನಾಲ್ಡೊ – 19 ಕೋಟಿ ರೂ.


ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಪೋರ್ಚುಗಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಪ್ರತಿ ಪೋಸ್ಟ್‌ಗೆ ಸುಮಾರು 19 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ Instagram ನಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಕ್ರೀಡಾ ತಾರೆಯಾಗಿದ್ದಾರೆ. ರೊನಾಲ್ಡೊ ಬರೋಬ್ಬರಿ 442 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. (ಮೂಲ: ಟ್ವಿಟರ್)

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!