ಪ್ರಧಾನಿ ಮೋದಿಯಿಂದ ವರ್ಚ್ಯುಯಲ್ ರ‍್ಯಾಲಿ : 98 ಕಡೆ ಪ್ರಸಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವರ್ಚ್ಯುಯಲ್ ವೇದಿಕೆ ಮೂಲಕ ಪ್ರಚಾರ ನಡೆಸಲಿದ್ದಾರೆ.

ಇಂದು ಮೊದಲ ಹಂತದ ಪ್ರಚಾರ ನಡೆಸಲಿದ್ದು, ಇದು ಫೆ.10 ರಂದು ಚುನಾವಣೆ ನಡೆಯಲಿರುವ 21 ವಿಧಾನಸಭೆ ಕ್ಷೇತ್ರಗಳ 98 ಕಡೆಗಳಲ್ಲಿ ಪ್ರಸಾರವಾಗಲಿದೆ. ಜನ್ ಚೌಪಲ್ ಹೆಸರಿನ ರ‍್ಯಾಲಿ ಇದಾಗಿದ್ದು, ರ‍್ಯಾಲಿಯಲ್ಲಿ ಪ್ರಧಾನಿ ಮಾಡಲಿರುವ ಪ್ರಚಾರ ಎಲ್‌ಇಡಿ ಸ್ಕ್ರೀನ್ ಮೂಲಕ ಏಕಕಾಲಕ್ಕೆ ಸುಮಾರು 49 ಸಾವಿರಕ್ಕೂ ಹೆಚ್ಚು ಜನರನ್ನು ತಲುಪಲಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗ್ರಾದಿಂದ ಹಾಗೂ ಡಿಸಿಎಂ ದಿನೇಶ್ ಶರ್ಮಾ ಲಖನೌನಿಂದಲೇ ರ‍್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!