ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಕನ್ನಡ ಚಿತ್ರರಂಗ ಮರೆಯಲಾರದ ನಟ ಡಾ.ವಿಷ್ಣುವರ್ಧನ್ ಅವರ 12 ನೇ ವರ್ಷದ ಪುಣ್ಯಸ್ಮರಣೆ.
ವಿಷ್ಣುವರ್ಧನ್ ಅವರು ನಮ್ಮನ್ನಗಲಿ ವರ್ಷಗಳೇ ಕಳೆದರೂ ಈಗಲೂ ಅಭಿಮಾನಿಗಳ ಮನದಲ್ಲಿ ಜೀವಂತ.
12 ನೇ ಪುಣ್ಯಸ್ಮರಣೆಯಂದು ವಿಷ್ಣುದಾದಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಶೇರ್ ಮಾಡಿ ವಿಷ್ಣು ಅವರನ್ನು ನೆನೆದಿದ್ದಾರೆ.
ಪುಣ್ಯಸ್ಮರಣೆಯಂದು ವಿಷ್ಣುವರ್ಧನ್ ಅವರ ಅಭಿಮಾನಿಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕುಟುಂಬದವರು ಸ್ಮಾರಕ ಜಾಗಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇಂದಿಗೂ ವಿಷ್ಣುವರ್ಧನ್ ಅವರ ಸಿನಿಮಾಗಳು ಟಿವಿಯಲ್ಲಿ ಕಂಡರೆ ಜನ ಪ್ರೀತಿಯಿಂದ ಕಣ್ತುಂಬಿಕೊಳ್ಳುತ್ತಾರೆ.