ಹೊಸದಿಗಂತ ವರದಿ, ಕಲಬುರಗಿ:
ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ದುರ್ಗಾವಾಹಿನಿ ಕಾರ್ಯಕರ್ತರಿಂದ ಗೋವಿನ ಸಗಣಿಯಿಂದ ಬೆರಣಿಗಳನ್ನು ತಟ್ಟಿ,ಶ್ರಮದಾನ ಮಾಡುವ ಮೂಲಕ ತಮ್ಮ ಸೇವೆಯನ್ನು ಸಲ್ಲಿಸಿದರು.
ಕಲಬುರಗಿ ಜಿಲ್ಲೆಯ ಸೇಡಂ ರಸ್ತೆಯಲ್ಲಿರುವ ಶ್ರೀ ನವನೀತ ಗೋ ಶಾಲೆಗೆ ಬೆಳಿಗ್ಗೆ ಆಗಮಿಸಿ ಗೋ ಮಾತೆಯ ಸೇವೆಯನ್ನು ಮಾಡಿದರು.
ಇದೇ ಸಂದರ್ಭದಲ್ಲಿ ಗೋ ಆಧಾರಿತ ಕೃಷಿ ಮತ್ತು ಗೋ ಉತ್ಪನ್ನಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.
ಸೇವಾ ಚಟುವಟಿಕೆಯಲ್ಲಿ ಮಾಧವಿ ಐನಾಪುರ, ಅವಿನಾಶ್ ಭೋರಂಚಿ, ಸಚಿನ,ಶಿವಕುಮಾರ್, ಬಸವಪ್ರಭು ಪಾಗಾ, ಆಕಾಶ ಸಕ್ರಿ, ಜಗದೀಶ್ ಯಂಪಳ್ಳಿ, ಪೂಜಾ ಆಲಗೂಡ, ನಾಗಲಕ್ಷ್ಮಿ, ನಾಗವೇಣಿ, ಅಂಕಿತಾ, ಮಿನಲ್ ಪತಂಗೆ, ಭಾಗ್ಯಶ್ರೀ ಮಠಪತಿ ಸೇರಿದಂತೆ ಅನೇಕ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭಾಗವಹಿಸಿದ್ದರು.