ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದ ಸಂಘ ನಿಕೇತನದಲ್ಲಿ ನಡೆಯುತ್ತಿರುವ ೭೭ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭಕ್ಕೆ ಸೋಮವಾರ ಶ್ರೀ ಚಿತ್ರಾಪುರ ಮಠ ಸಂಸ್ಥಾನ ಶಿರಾಲಿ ಇದರ ಮಠಾಧೀಶರಾದ ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಭೇಟಿ ನೀಡಿದರು.
ಶ್ರೀ ದೇವರ ದರ್ಶನ , ಮಂಗಳಾರತಿ ಬಳಿಕ ಶ್ರೀಗಳವರಿಂದ ಆಶೀರ್ವಚನ ನಡೆಯಿತು.
ಈ ಸಂದರ್ಭ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಸಮಾಜಮುಖಿ ಚುಟುವಟಿಕೆ ಹಾಗೂ ವ್ಯವಸ್ಥೆ ಬಗ್ಗೆ ಶ್ರೀಗಳು ಮೆಚ್ಚುಗೆ ಸೂಚಿಸಿದರು.
ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಪದಾಧಿಕಾರಿಗಳು, ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ವಿನೋದ್ ಶೆಣೈ, ರಘುವೀರ್ ಕಾಮತ್, ಗಜಾನನ ಪೈ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ , ಸತೀಶ್ ಪ್ರಭು , ಆನಂದ ಪಾಂಗಳ, ಸುರೇಶ್ ಕಾಮತ್, ಯಸ್.ಆರ್. ಕುಡ್ವ, ಜೀವನರಾಜ್ ಶೆಣೈ, ಅಭಿಷೇಕ್ ಭಂಡಾರಿ, ನಂದನ್ ಮಲ್ಯ ಹಾಗೂ ನೂರಾರು ಸ್ವಯಂಸೇವಕರು ಉಪಸ್ಥಿತರಿದ್ದರು.
ಚಿತ್ರ: ಮಂಜು ನೀರೇಶ್ವಾಲ್ಯ