ಜಾಹೀರಾತಿನಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ : ಮತ್ತೆ ಜನರ ಕೆಂಗಣ್ಣಿಗೆ ಗುರಿಯಾದ ಅಮೀರ್ ಖಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್‌ಗೆ ಇತ್ತೀಚೆಗೆ ಏನೇ ಮಾಡಿದರೂ ಟ್ರೋಲ್ ಆಗುತ್ತಿದೆ. ಅದಕ್ಕೆ ಸರಿಯಾಗಿ ಅಮೀರ್‌ ನಟಿಸಿದ ಹೊಸ ಜಾಹಿರಾತು ಇದೀಗ ಭಾರೀ ವಿವಾದ ಸೃಷಿಸಿದೆ.
ಅಮಿರ್‌ ಖಾನ್ ಮತ್ತು ಕಿಯಾರಾ ಅಡ್ವಾಣಿ ಒಳಗೊಂಡ ʼಎಯು ಬ್ಯಾಂಕ್‌ ಇಂಡಿಯಾʼ ಜಾಹೀರಾತು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ .ಅಮೀರ್ ಯಾವಾಗಲೂ ಹಿಂದೂ ಧರ್ಮಕ್ಕೆ ನೋವುಂಟು ಮಾಡುತ್ತಿದ್ದಾರೆ ಮತ್ತು ಅವರ ಸಂಪ್ರದಾಯಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಜನರು ಕಿಡಿಕಾರಿದ್ದಾರೆ.
ಜಾಹೀರಾತಿನಲ್ಲಿ ʼಹಿಂದೂ ಧರ್ಮದಲ್ಲಾಗಬೇಕಾದ ಬದಲಾವಣೆಗಳʼ ಕುರಿತು ಪ್ರಸ್ತಾಪಿಸಲಾಗಿದೆ. ಜಾಹಿರಾತಿನಲ್ಲಿ ವರನಾಗಿ ಕಾಣಿಸಿಕೊಂಡಿರುವ ಅಮೀರ್‌ ಖಾನ್‌, ಸ್ಟೀರಿಯೊಟೈಪ್‌ ಸಂಪ್ರದಾಯ ಮುರಿಯಲು ಮನೆ ಅಳಿಯನಾಗಿ ವಧು ಕಿಯಾರಾ ಮನೆಗೆ ಬಲಗಾಲಿಟ್ಟು ಪ್ರವೇಶಿಸುತ್ತಾರೆ.  ಹಿಂದೂ ಧರ್ಮದಲ್ಲಿ ವಧು ಪತಿಯ ಮನೆಗೆ ತೆರಳುವಾಗ ಪಾಲಿಸುವ ಸಂಪ್ರದಾಯಗಳೆಲ್ಲವನ್ನು ʼವರʼ ಅಮಿರ್‌ ಪಾಲಿಸುತ್ತಾರೆ. ಇದನ್ನು ʼಕ್ರಾಂತಿಕಾರಕʼ ಬದಲಾವಣೆ ಎಂದು ಕರೆದುಕೊಂಡಿರುವ ಬ್ಯಾಕ್‌, ಈ ರೀತಿಯ ʼಹೊಸ ಬದಲಾವಣೆಗಳಿಗಾಗಿʼ ಎಯು ಬ್ಯಾಂಕ್‌ ಅನ್ನು ಬೆಂಬಲಿಸಿ ಎಂದು ಹೇಳಿಕೊಂಡಿದೆ.  ಜಾಹಿರಾತಿಗೆ ಆಯ್ದುಕೊಂಡಿರುವ ವಿಚಾರ ಇದೀಗ ವ್ಯಾಪಕ್‌ ಟೀಕೆಗೆ ತುತ್ತಾಗಿದ್ದು, ಜಾಹೀರಾತನ್ನು ಬಹಿಷ್ಕರಿಸುವಂತೆ ಆನ್‌ಲೈನ್‌ನಲ್ಲಿ ಚಳುವಳಿ ಆರಂಭಗೊಂಡಿದೆ.

“ಅಮೀರ್ ಖಾನ್ ಹಿಂದೂ ಸಂಪ್ರದಾಯಗಳನ್ನು ಅಪಹಾಸ್ಯ ಮಾಡುವ ಜಾಹೀರಾತುಗಳನ್ನು ಮಾಡಲು ಇಷ್ಟಪಡುತ್ತಾರೆ.., ಅವರು ಹಿಜಾಬ್, ಬುರ್ಕಾ, ಟ್ರಿಪಲ್ ತಲಾಖ್, ಹಲಾಲಾಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳನ್ನು ಮಾಡಲು ಅಥವಾ ಮಾತನಾಡಲು ಎಂದಿಗೂ ಧೈರ್ಯ ಮಾಡುವುದಿಲ್ಲ ಎಂದು ನೆಟ್ಟಿಗರು ಸೋಷಿಯಲ್‌ ಮೀಡಿಯಾದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ʼಮೀರ್‌ಖಾನ್ ಮತ್ತೆ ಮತ್ತೆ ಹಿಂದೂ ವಿರೋಧಿ ವಿಚಾರಗಳನ್ನು ಪ್ರಚಾರ ಮಾಡುತ್ತಾರೆ. ಅದಕ್ಕಾಗಿ ಸ್ತ್ರೀವಾದದ ಕವಚವನ್ನು ಬಳಸುತ್ತಾರೆ. ಬದ್ಲಾವ್ (ಬದಲಾವಣೆ) ನೆಪದಲ್ಲಿ ಪುರುಷರು ಪತ್ನಿ ಮನೆ ಸೇರಬೇಕೆಂದು ಸೂಚಿಸುತ್ತಾರೆ. ಬಾಲಿವುಡ್ ಸಂಪ್ರದಾಯಗಳನ್ನು ಬದಲಾಯಿಸಲು ಮಹಿಳೆಯರ ಬ್ರೈನ್‌ವಾಶ್ ಮಾಡುತ್ತದೆ. ಆದರೆ ವಿವಾಹಿತ ಪುರುಷರು ತಮ್ಮ ಹೆಂಡತಿಯ ಪೋಷಕರ ಮನೆಯಲ್ಲಿ ವಾಸಿಸುವ ಸಮಾನ ಹಕ್ಕು ಹೊಂದಿದ್ದಾರೆಯೇ ? ಎಂಬ ಸಂಗತಿಯನ್ನು ಇಂತಹ ಜಾಹಿರಾತು ನಿರ್ಮಾತೃಗಳು ಗಮನಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕಾಶ್ಮೀರ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಜಾಹೀರಾತನ್ನು ಟೀಕಿಸಿದ್ದಾರೆ. ಟ್ವಿಟರ್‌ ನಲ್ಲಿ ಜಾಹಿರಾತು ವೀಡಿಯೊವನ್ನು ಹಂಚಿಕೊಂಡಿರುವ ಅಗ್ನಿಹೋತ್ರಿ, ಜಾಹಿರಾತು ತಯಾರಕರನ್ನು ‘ಈಡಿಯಟ್ಸ್’ ಎಂದು ಕರೆದಿದ್ದಾರೆ. ನಮ್ಮ ಸಾಮಾಜಿಕ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಬದಲಾಯಿಸುವ ಜವಾಬ್ದಾರಿಯನ್ನು ಈ ಬ್ಯಾಂಕ್‌ಗಳಿಗೆ ಯಾವಾಗ ನೀಡಲಾಗಿದೆ?. ಬದಲಾಯಿಸಬೇಕಿರುವುದು ನಮ್ಮ ಸಂಪ್ರದಾಯಗಳನಲ್ಲ, ಇಂತಹ ಮತಿಭ್ರಷ್ಟ ಬ್ಯಾಂಕುಗಳನ್ನು ಎಂದು ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!