ವಿವೇಕ್ ಅಗ್ನಿಹೋತ್ರಿಯವರ ಮುಂದಿನ ಚಿತ್ರ ‘ಡೆಲ್ಲಿ ಫೈಲ್ಸ್’ನಲ್ಲಿ ಏನಿರಲಿದೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಚೆನ್ನೈನಲ್ಲಿದ್ದ ನಿರ್ದೇಶಕ ವಿವೇಕ ರಂಜನ್ ಅಗ್ನಿಹೋತ್ರಿ ತಮ್ಮ ಮುಂದಿನ ಸಿನಿಮಾ ‘ಡೆಲ್ಲಿ ಫೈಲ್ಸ್‌ʼ ಯಾವುದರ ಕುರಿತಾಗಿ ಎಂಬ ಪ್ರಶ್ನೆಗೆ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಹೀಗೆ ಉತ್ತರಿಸಿದ್ದಾರೆ.
• ‘ಡೆಲ್ಲಿ ಫೈಲ್ಸ್‌ʼ ಎಂದರೆ ಕೇವಲ ದೆಹಲಿಯ ಭೌಗೋಳಿಕ ವ್ಯಾಪ್ತಿಗೆ ಸಂಬಂಧಿಸಿದ್ದಲ್ಲ. ದೆಹಲಿಯಲ್ಲಿ ಕೂತು ಆಡಳಿತ ನಡೆಸಿದ ಮೊಘಲರು, ಬ್ರಿಟೀಷರಿಂದ ಹಿಡಿದು ಆಧುನಿಕ ಆಡಳಿತಗಾರರವರೆಗೆ ಹಲವು ಅಧಿಕಾರ ಶಾಹಿಗಳು ಹೇಗೆ ವ್ಯವಸ್ಥಿತವಾಗಿ ದೇಶವನ್ನು ಹಾಳು ಮಾಡಿದರು ಎಂಬುದನ್ನು ಅನಾವರಣ ಗೊಳಿಸಲಿದೆ.
• ಹನ್ನೆರಡನೆಯ ಶತಮಾನದಿಂದಲೂ ದೇಶದ ಆಡಳಿತದ ಕೇಂದ್ರಬಿಂದುವಾಗಿ, ದೇಶದೇಳುಬೀಳುಗಳ ಸಾಕ್ಷಿಯಾಗಿರುವ ದೆಹಲಿ ಹಲವು ಕರಾಳ ಸತ್ಯಗಳನ್ನು ತನ್ನಲ್ಲಿ ಮುಚ್ಚಿಟ್ಟುಕೊಂಡಿದೆ. ಈ ಕುರಿತು ಸತ್ಯವನ್ನು ತಿಳಿಸುತ್ತೇನೆ.
• ಇತಿಹಾಸವು ಸತ್ಯ ಮತ್ತು ಸಾಕ್ಷಿಗಳ ಆಧಾರದಲ್ಲಿರಬೇಕೇ ವಿನಃ ನಿರೂಪಣತ್ಮಕವಾಗಿ ಅಲ್ಲ. ಆದರೆ ಭಾರತದ ಸಮಸ್ಯೆಯೇನೆಂದರೆ ಇತಿಹಾಸವನ್ನು ರಾಜಕೀಯ ಅಜೆಂಡಾಗಳ ಆಧಾರದಲ್ಲಿ ಹಲವರು ತಮಗೆ ಬೇಕಾದ ರೀತಿಯಲ್ಲಿ ನಿರೂಪಣೆ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಪಾಶ್ಚಿಮಾತ್ಯ ಜಾತ್ಯತೀತತೆಯ ಆಧಾರದಲ್ಲಿ ನಿರೂಪಣೆ ಮಾಡಲಾಗಿದೆ. ಆ ಮೂಲಕ ಶ್ರೇಷ್ಠ ಹಿಂದೂ ನಾಗರೀಕತೆಯನ್ನು ಕಡೆಗಣಿಸಿ ನಾವು (ಹಿಂದೂಗಳು) ಅಶಕ್ತರು, ನಾವು ಎಲ್ಲವನ್ನೂ ಪಾಶ್ಚಿಮಾತ್ಯ ಆಡಳಿತಗಾರರು, ದಾಳಿಕೋರರಿಂದಲೇ ಕಲಿತಿದ್ದೇವೆ ಎಂದು ಬಿಂಬಿಸಲಾಯಿತು. ಇದು ಇತಿಹಾಸದ ತಪ್ಪಾದ ನಿರೂಪಣೆ.
• ಅದು (1984) ಭಾರತದ ಇತಿಹಾಸದ ಕರಾಳ ಅಧ್ಯಾಯ. ಸಿಖ್‌ ಭಯೋತ್ಪಾದಕತೆಯನ್ನು ಹತ್ತಿಕ್ಕುವ ನೆಪದಲ್ಲಿ ಕಾಂಗ್ರೆಸ್‌ ನಡೆದುಕೊಂಡ ರೀತಿ ಅಮಾನವೀಯವಾದದು. ಇದು ಕೇವಲ ರಾಜಕೀಯ ಹಿತಾಸಕ್ತಿ ಮತ್ತು ವೋಟ್‌ ಬ್ಯಾಂಕ್ ಗೋಸ್ಕರ ಕಾಂಗ್ರೆಸ್‌ ಸೃಷ್ಟಿಸಿದ್ದು.ಮೊದಲು, ಅವರು (ಕಾಂಗ್ರೆಸ್) ಅದನ್ನು ರಚಿಸಿದರು, ನಂತರ ಅದನ್ನು ನಾಶಪಡಿಸಿದರು, ಸಾಕಷ್ಟು ಅಮಾಯಕರನ್ನು ಕೊಂದರು ಮತ್ತು ಕೊನೆಯಲ್ಲಿ ಅದನ್ನು ಮುಚ್ಚಿಟ್ಟರು. ಇದಕ್ಕೆ ಇಲ್ಲಿಯವರೆಗೂ ನ್ಯಾಯ ಸಿಕ್ಕಿಲ್ಲ, ಅದಕ್ಕಿಂತ ಕೆಟ್ಟದ್ದೇನಿದೆ?
• ಆದ್ದರಿಂದ ಇತಿಹಾಸದ ಸತ್ಯಗಳನ್ನು ಜನರಿಗೆ ಹೇಳಿ, ಅವರು ಸರಿಯಾದ ಇತಿಹಾಸವನ್ನು ತಿಳಿದಿಕೊಳ್ಳುವಂತೆ ಮಾಡಿದಾಗ ಸತ್ಯದ ಪರವಾಗಿ ಅವರೇ ಎದ್ದು ನಿಲ್ಲುತ್ತಾರೆ ಮತ್ತು ನ್ಯಾಯಕ್ಕೋಸ್ಕರ ಆಗ್ರಹಿಸುತ್ತಾರೆ. ಆಗ ಸರ್ಕಾರಗಳೂ ಮಾತು ಕೇಳಲೇಬೇಕಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!