ರಷ್ಯ ಅಧ್ಯಕ್ಷ ಪುಟಿನ್ ಕ್ಯಾನ್ಸರ್ ಚಿಕಿತ್ಸೆಗೆ ತೆರಳಲಿದ್ದಾರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅನಾರೋಗ್ಯದ ಕುರಿತಾಗಿ ಕಳೆದ ಕೆಲ ದಿನಗಳಿಂದ ಹಲವಾರು ಊಹಾಪೋಹಗಳು ವರದಿಯಾಗುತ್ತಿದ್ದವು. ಅವರು ಗಂಭೀರ ರೋಗದಿಂದ ಬಳಲುತ್ತಿದ್ದಾರೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದ್ದು, ಪುಟಿನ್‌ ಶೀಘ್ರದಲ್ಲಿಯೇ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ತಮ್ಮ ಅಧಿಕಾರವನ್ನು ಭದ್ರತಾಪಡೆಯ ಮುಖ್ಯಸ್ಥ, ಫೆಡರಲ್ ಪೊಲೀಸ್ ಪಡೆಯ ಮಾಜಿ ಕಮಾಂಡರ್ ನಿಕೊಲಾಯ್ ಪಟ್ರುಶೆವ್‌ ಅವರಿಗೆ ತಾತ್ಕಾಲಿಕವಾಗಿ ಹಸ್ತಾಂತರಿಸಲಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಪುಟಿನ್‌ 18 ತಿಂಗಳುಗಳಿಂದ ಕಿಬ್ಬೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಮತ್ತು ಪಾರ್ಕಿನ್‌ಸನ್‌ನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಜನರಲ್ ಎಸ್‌ವಿಆರ್ ಟೆಲಿಗ್ರಾಮ್ ಚಾನೆಲ್ ವರದಿ ಮಾಡಿದೆ. ರಷ್ಯಾದ ವಿಶ್ವಾಸರ್ಹ ಮೂಲಗಳಿಂದ ಈ ಮಾಹಿತಿ ತಿಳಿದುಬಂದಿರುವುದಾಗಿ ಹೇಳಿದೆ. 69 ವರ್ಷದ ಪುಟಿನ್ ಅವರಿಗೆ ಏಪ್ರಿಲ್ ಮಾಸದ ದ್ವಿತೀಯಾರ್ಧದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ವೈದ್ಯರು ಸೂಚಿಸಿದ್ದರು. ಆದರೆ ಯುದ್ಧ ಮತ್ತಿತರೆ ಕಾರಣಗಳಿಂದಾಗಿ ಪುಟಿನ್‌ ಶಸ್ತ್ರಚಿಕಿತ್ಸೆಗೆ ಒಳಪಡಿವುದು ತಡವಾಗಿದೆ. ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಅವರಿಗೆ ಕೆಲಸಮಯ ಬೇಕಾಗುತ್ತದೆ. ಆ ಬಳಿಕ ಮತ್ತೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಎಂದು ವರದಿ ಹೇಳಿದೆ.
ಪುಟಿನ್‌ ಅನಾರೋಗ್ಯ ಉಕ್ರೇನ್‌ ಮೇಲಿನ ಅಕ್ರಮಣದ ಮೇಲೆ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ರಷ್ಯಾ ಉಕ್ರೇನ್‌ ನಲ್ಲಿ ತೋರುತ್ತಿರುವ ಆಕ್ರಮಣಕಾರಿ ಧೋರಣೆಯ ತೀವ್ರತೆ ಕಡಿಮೆಯಾಗಬಹುದು ಎಂದು ಹೇಳಲಾಗಿದೆ. ನಿಕೊಲಾಯ್ ಪಟ್ರುಶೆವ್‌ ಅವರು ಪುಟಿನ್‌ ರಿಂದ ಅಧಿಕಾರ ವಹಿಸಿಕೊಳ್ಳುವ ಜೊತೆಗೆ ಯುದ್ಧವನ್ನು ಮುನ್ನಡೆಸುವ ಜವಾಬ್ದಾರಿಯನ್ನೂ ಹೊರಲಿದ್ದಾರೆ ಎಂದು ವರದಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!