ವೋಟರ್ ಐಡಿ ಪರಿಷ್ಕರಣೆ ಅಕ್ರಮ: ಕಾಂಗ್ರೆಸ್ ವಿರುದ್ಧ ಮಹತ್ವದ ದಾಖಲೆ ಬಿಡುಗಡೆಗೊಳಿಸಿದ ಬಿಜೆಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿನ ಅಕ್ರಮ ಆರೋಪ ಕುರಿತು ಆಡಳಿತರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಜಟಾಪಟಿ ಜೋರಾಗಿದ್ದು,ಇದರ ವಿರುದ್ಧ ದೂರು ದಾಖಲಿಸಿದ್ದ ಕಾಂಗ್ರೆಸ್​ ವಿರುದ್ಧವೇ ಇದೀಗ ಬಿಜೆಪಿ ಪ್ರತ್ಯಸ್ತ್ರ ಪ್ರಯೋಗಿಸಿದ್ದು, ಮಹತ್ವದ ದಾಖಲೆ ಬಿಡುಗಡೆ ಮಾಡಿದೆ.

ಸ್ಫೋಟಕ ದಾಖಲೆಗಳ ಜತೆ ಕಾಂಗ್ರೆಸ್ ವಿರುದ್ಧ ದೂರು ಚುನಾವಣೆ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಚಿಲುಮೆ ಸಂಸ್ಥೆಗೆ ಅನುಮತಿ ಕೊಟ್ಟಿದ್ದೇ ಕಾಂಗ್ರೆಸ್, ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2017ರಲ್ಲಿ ಚಿಲುಮೆ ಸಂಸ್ಥೆಗೆ ಅನುಮತಿ ನೀಡಲಾಗಿದೆ. 2017ರ ಸೆಪ್ಟೆಂಬರ್ 27ರಂದು ಬಿಬಿಎಂಪಿ ಅನುಮತಿ ಕೊಟ್ಟಿತ್ತು ಎಂದು ದೂರಿನಲ್ಲಿ ಹಲವು ದಾಖಲೆಗಳನ್ನು ಚುನಾವಣೆ ಆಯೋಗಕ್ಕೆ ಸಲ್ಲಿಸಿದೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2017ರ ಸೆಪ್ಟೆಂಬರ್​​ 27ರಂದು BBMP ವೈಟ್​​ಫೀಲ್ಡ್ ಉಪವಲಯದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ಬಿಎಲ್​​ಒಗಳು, ಜಿಲ್ಲಾಧಿಕಾರಿಗಳು, ಕಂದಾಯ ಅಧಿಕಾರಿಗಳ ಜೊತೆಗೂಡಿ ಮತದಾನ ಪಟ್ಟಿ ಪರಿಷ್ಕರಣೆ & ಇತರೆ ಕಾರ್ಯಗಳನ್ನ ನಿರ್ವಹಿಸಲು ಆದೇಶ ಹೊರಡಿಸಿತ್ತು ಎಂದು ದಾಖಲೆ ಬಿಡುಗಡೆ ಮಾಡಿದೆ.

ಬಿಎಲ್ ಓಗಳ ಜೊತೆ ಸೇರಿಕೊಂಡು ನಿಯಮಾನುಸಾರ ಕೆಲಸ ನಿರ್ವಹಿಸಲು ಚಿಲುಮೆ ಸಂಸ್ಥೆಗೆ ಪಾಲಿಕೆ ಆದೇಶ ನೀಡಿತ್ತು. ಆದರೆ ಚಿಲುಮೆ ಸಂಸ್ಥೆ ಬಿಎಲ್ ಓಗಳ ಬದಲಾಗಿ ತಾವೇ ಬಿಎಲ್ ಓಗಳಾಗಿ ನಕಲಿ ಐಡಿ ಸೃಷ್ಟಿಸಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿರುವ ಆರೋಪ ಬಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!