ಮೋರ್ಬಿ ಸೇತುವೆ ದುರಂತದ ವೇಳೆ ರಕ್ಷಣೆಗೆ ಸಾಥ್ ಕೊಟ್ಟ ಕಾಂತಿಲಾಲ್‌ ನ ಕೈ ಹಿಡಿದ ಮತದಾರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಗುಜರಾತಿನಲ್ಲಿ ಬಿಜೆಪಿ ಗೆಲುವು ಸಾಧಿಸಿ ಸಂಭ್ರಮಿಸಿದ್ದು, ಈ ವೇಳೆ ಮೋರ್ಬಿ ಸೇತುವೆ ದುರಂತದ ವೇಳೆ ರಕ್ಷಣೆ ಮಾಡಿ ಸುದ್ದಿಯಾಗಿದ್ದ ಕಾಂತಿಲಾಲ್ 62 ಸಾವಿರಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಗೆಲುವು ಕಂಡಿದ್ದಾರೆ.

ಇತ್ತೀಚೆಗೆ ಗುಜರಾತಿನ ಮೋರ್ಬಿಯಲ್ಲಿ ತೂಗು ಸೇತುವೆ ಕುಸಿದು 135 ಜನರು ಸಾವನ್ನಪ್ಪಿದ್ದರು. ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾ ಭರ್ಜರಿ ಗೆಲುವು ಸಾಧಿಸಿದ್ದಾರೆ.

5 ಬಾರಿ ಶಾಸಕರಾಗಿದ್ದ ಅಮೃತೀಯ ಅವರು ಮೋರ್ಬಿ ಸೇತುವೆ ಕುಸಿತದ ನಂತರ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಅವರು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ರಕ್ಷಣೆಯಲ್ಲಿ ತೊಡಗಿದ್ದ ಚಿತ್ರಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!