ಉಚಿತ ಸ್ವಿಮ್‌ ಸೂಟ್‌ಗಾಗಿ ಒಳಉಡುಪಿನಲ್ಲಿ ಬಂದು ಮತ ಚಲಾಯಿಸಿದ ಆಸ್ಟ್ರೇಲಿಯನ್ನರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಸ್ಟ್ರೇಲಿಯದಲ್ಲಿ ನೂತನ ಪ್ರಧಾನ ಮಂತ್ರಿ ಆಯ್ಕೆ ಚುನಾವಣೆಯಲ್ಲಿ ಮತ ಚಲಾಯಿಸಲು ಅನೇಕ ಜನ ಒಳಉಡುಪಿನಲ್ಲಿ ಬಂದು ಮತಚಲಾಯಿಸಿರುವ ವಿಚಾರ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಮಹಿಳೆಯರು ಸ್ವಿಮ್ಮಿಂಗ್‌ ಡ್ರೆಸ್‌ ಧರಿಸಿದರೆ, ಪುರುಷರು ಒಳ ಉಡುಪಿನಲ್ಲಿ ಬಂದು ಮತ ಚಲಾಯಿಸಿದ್ದಾರೆ. ಬಡ್ಡಿ ಸ್ಮಗ್ಲರ್ಸ್ ಎಂಬ ಕಂಪನಿ ನೀಡಿದ ಆಫರ್‌ ಇದಕ್ಕೆಲ್ಲಾ ಮುಖ್ಯ ಕಾರಣ.

ಒಳ ಉಡುಪು ಧರಿಸಿ ವೋಟ್ ಮಾಡುತ್ತಿರುವುದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದರೆ, ತಮ್ಮ ಕಂಪನಿಯ ಬ್ರಾಂಡೆಡ್ ಸ್ವಿಮ್ಮಿಂಗ್‌ ಡ್ರೆಸ್ ಉಚಿತವಾಗಿ ನೀಡುತ್ತೇವೆಂದು ಕಂಪನಿ ಘೋಷಿಸಿದೆ. ಈ ಆಫರ್‌ನ ಲಾಭ ಪಡೆಯಲು ಹಲವರು ಬಣ್ಣಬಣ್ಣದ ಒಳಉಡುಪುಗಳಲ್ಲಿ ಮತಗಟ್ಟೆಗಳಿಗೆ ತೆರಳಿ ವೋಟ್‌ ಮಾಡಿದ್ದಾರೆ.

ತಾವು ನೀಡಿದ ಆಫರ್‌ಗೆ ಅನಿರೀಕ್ಷಿತ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಬಡ್ಡಿ ಸ್ಮಗ್ಲರ್‌ ಕಂಪನಿ ಅಂತಸ ವ್ಯಕ್ತಪಡಿಸಿದೆ. ಒಂದಿಬ್ಬರು ಭಾಗಿಯಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ ನೂರಾರು ಮಂದಿ ಭಾಗವಹಿಸುವಿಕೆ ನಿಜಕ್ಕೂ ಆಶ್ಚರ್ಯವನ್ನುಂಟುಮಾಡಿದೆ ಎಂದಿದ್ದಾರೆ. ಕಂಪನಿ ಚಾಲೆಂಜ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ಘೋಷಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!