ದಿಗಂತ ವರದಿ ಮಂಗಳೂರು:
ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದ ಮತ ಎಣಿಕೆ ಇನ್ನು ಕೆಲವೇ ನಿಮಿಷಗಳಲ್ಲಿ ಆರಂಭಗೊಳ್ಳಲಿದೆ ಎಂದು ಚುನಾವಣಾಧಿಕಾರಿ ಡಾ.ರಾಜೇಂದ್ರ ಕೆ.ವಿ ಇದೀಗ ತಿಳಿಸಿದ್ದಾರೆ.
289 ಮತಗಟ್ಟೆಗಳ ಮತಪತ್ರಗಳನ್ನು ಏಜೆಂಟುಗಳ ಸಮ್ಮುಖದಲ್ಲಿ ಬೆರಸಿ 25ರ ಕಟ್ಟುಗಳನ್ನಾಗಿ ಮಾಡಲಾಗಿದೆ. ಮತ ಎಣಿಕೆಗೆ 14 ಟೇಬಲುಗಳನ್ನು ವ್ಯವಸ್ಥೆ ಮಾಡಲಾಗಿದೆ.
ಆರಂಭದಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಲಾಗುವುದು. ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಚಿತ್ರಣ ಲಭಿಸಲಿದೆ ಎಂದವರು ತಿಳಿಸಿದರು.
ಕ್ಷೇತ್ರದಲ್ಲಿ ಬಿಜೆಪಿಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಪಕ್ಷದಿಂದ ಮಂಜುನಾಥ ಭಂಡಾರಿ ಮತ್ತು ಎಸ್ ಡಿ ಪಿ ಐ ಯಿಂದ ಶಾಫಿ ಬೆಳ್ಳಾರೆ ಸ್ಪರ್ಧಿಸುತ್ತಿದ್ದಾರೆ.