ಮಹಾರಾಷ್ಟ್ರ, ಜಾರ್ಖಂಡ್ ನಲ್ಲಿ ಮತದಾನ ಅಂತ್ಯ: ಮತಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆ ಮತದಾನದ ಸಮಯ ಮುಕ್ತಾಯವಾಗಿದೆ. ಎರಡೂ ರಾಜ್ಯಗಳ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಮಹಾರಾಷ್ಟ್ರದ ಎಲ್ಲಾ 288 ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಬೆಳಿಗ್ಗೆ 7 ಗಂಟೆಯಿಂದ ನಡೆದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ.

ಜಾರ್ಖಂಡ್ ನಲ್ಲಿ ಇಂದು 2ನೇ ಹಂತದಲ್ಲಿ 38 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಜಾರ್ಖಂಡ್ ನಲ್ಲಿಯೂ ಚುನಾವಣಾ ಸಮಯ ಮುಕ್ತಾಯವಾಗಿದೆ.

ಎರಡೂ ರಾಜ್ಯಗಳಲ್ಲಿ ಸಂಜೆ 5 ಗಂಟೆಯವರೆಗಿನ ಮತದಾನದ ವಿವರ ನೋಡುವುದಾದರೆ ಮಹಾರಾಷ್ಟ್ರದಲ್ಲಿ ಸಂಜೆ 5 ಗಂಟೆಯವರೆಗೆ ಶೇ.58.22ರಷ್ಟು ಮತದಾನವಾಗಿದೆ. ಜಾರ್ಖಂಡ್ ನಲ್ಲಿ ಸಂಜೆ 5 ಗಂಟೆಯವರೆಗೆ ಶೇ.67.59ರಷ್ಟು ಮತದಾನವಾಗಿದೆ.

ಕೆಲವೇ ಹೊತ್ತಲ್ಲಿ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ ಹೊರಬೀಳಲಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!