ಮೇಘಾಲಯ-ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ: ಮತಗಟ್ಟೆಗಳ ಕಡೆಗೆ ಮತದಾರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಘಾಲಯ-ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಗೆ ಸೋಮವಾರ ಬಿಗಿ ಭದ್ರತೆಯ ನಡುವೆ ಮತದಾನ ಆರಂಭವಾಗಿದೆ.
ಮತದಾನಕ್ಕೂ ಮುನ್ನ ಕ್ಷೇತ್ರಗಳಲ್ಲಿ ಅಣಕು ಮತದಾನ ನಡೆಸಲಾಯಿತು. ಮೇಘಾಲಯದ 60 ವಿಧಾನಸಭಾ ಕ್ಷೇತ್ರಗಳ 3,419 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಇಂದು ಸಂಜೆ 4ರವರೆಗೆ ಮತದಾನ ನಡೆಯಲಿದೆ.

21 ಲಕ್ಷಕ್ಕೂ ಹೆಚ್ಚು ಮತದಾರರು (21,75,236) ಇದರಲ್ಲಿ 10.99 ಲಕ್ಷ ಮಹಿಳೆಯರು ಮತ್ತು 10.68 ಲಕ್ಷ ಪುರುಷ ಮತದಾರರಿದ್ದಾರೆ.  369 ಅಭ್ಯರ್ಥಿಗಳ ಭವಿಷ್ಯ ಮತದಾರರ ಕೈಯಲ್ಲಿದೆ.

ಒಟ್ಟು 3,419 ಮತಗಟ್ಟೆಗಳಲ್ಲಿ 120 ಎಲ್ಲಾ ಮಹಿಳಾ ನಿರ್ವಹಣಾ ಮತಗಟ್ಟೆಗಳು, 60 ಮಾದರಿ ಮತಗಟ್ಟೆಗಳು ಮತ್ತು 60 PWD ಮತಗಟ್ಟೆಗಳಾಗಿವೆ.

ಚುನಾವಣಾ ಆಯೋಗವು 119 ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು (ಸಿಎಪಿಎಫ್) ಮೇಘಾಲಯದಲ್ಲಿ ನಿಯೋಜಿಸಿದೆ.
640 ಮತಗಟ್ಟೆಗಳನ್ನು ‘ದುರ್ಬಲ’ ಎಂದು ಗುರುತಿಸಲಾಗಿದೆ, 323 ‘ನಿರ್ಣಾಯಕ’ಎಂದು ಮೇಘಾಲಯದ ಮುಖ್ಯ ಚುನಾವಣಾಧಿಕಾರಿ ಎಫ್‌ಆರ್ ಖಾರ್ಕೊಂಗೊರ್ ಹೇಳಿದ್ದಾರೆ. ಮಾರ್ಚ್ 2 ರವರೆಗೆ ಬಾಂಗ್ಲಾದೇಶದೊಂದಿಗೆ ಮೇಘಾಲಯದ ಅಂತರರಾಷ್ಟ್ರೀಯ ಗಡಿಯನ್ನು ಮುಚ್ಚಲು ಚುನಾವಣಾ ಸಮಿತಿ ಶನಿವಾರ ಆದೇಶಿಸಿದೆ.

ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ನಾವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ರಾಜ್ಯದಲ್ಲಿನ ಅಂತರಾಷ್ಟ್ರೀಯ ಗಡಿ ಪ್ರದೇಶಗಳಲ್ಲಿ CrPC ಯ ಸೆಕ್ಷನ್ 144 ಅನ್ನು ವಿಧಿಸಲಾಗಿದೆ” ಎಂದು ಖಾರ್ಕೊಂಗೊರ್ ಹೇಳಿದರು.

ನಾಗಾಲ್ಯಾಂಡ್‌ ರಾಜ್ಯದಲ್ಲಿ ಕೂಡಾ ಚುನಾವಣೆ ನಡೆಯುತ್ತಿದ್ದು, ಬಿಗಿ ಭದ್ರತೆಯ ನಡುವೆ ಮತದಾನ ಪ್ರಕ್ರಿಯೆ ಶುರುವಾಗಿದೆ. 60 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಇಂದು ರೂಪುಗೊಳ್ಳಲಿದೆ. ಇಲ್ಲಿ ಪುರುಷರು ಹಾಗೂ ಮಹಿಳೆಯರು ಸೇರಿ ಸರಿ ಸುಮಾರು 13,09,651 ಮತದಾರರು ಇದ್ದಾರೆ.

ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳ ವಿಧಾನಸಭೆ ಚುನಾವಣೆ 2023ಯ ಫಲಿತಾಂಶ ಮಾರ್ಚ್ 02 ರಂದು ಮತ ಎಣಿಕೆ ನಡೆಯಲಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!