ಭಾರತ ಹಾಕಿ ತಂಡದ ಆಯ್ಕೆ ಸಮಿತಿ ಸದಸ್ಯರಾಗಿ ವಿ.ಆರ್.ರಘುನಾಥ್

ಹೊಸದಿಗಂತ ವರದಿ, ಮಡಿಕೇರಿ:

ಭಾರತ ಹಾಕಿ ತಂಡದ ಆಯ್ಕೆ ಸಮಿತಿಯನ್ನು ಹೊಸದಾಗಿ ರಚಿಸಲಾಗಿದ್ದು, ಈ ಸಮಿತಿಯಲ್ಲಿ ಕೊಡಗಿನವರಾದ, ಮಾಜಿ ಒಲಂಪಿಯನ್ ವಿ.ಆರ್.ರಘುನಾಥ್ ಸ್ಥಾನ ಪಡೆದಿದ್ದಾರೆ.
ಪುರುಷರ ಹಾಕಿ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಹರ್ಬಿಂದರ್ ಸಿಂಗ್ ಹಾಗೂ ಮಹಿಳಾ ತಂಡದ ಸಮಿತಿ ಅಧ್ಯಕ್ಷರಾಗಿ ಸೈಯ್ಯದ್ ಆಲಿ ಅವರಿದ್ದಾರೆ. ಸದಸ್ಯರುಗಳಾಗಿ ಮೊಹಮ್ಮದ್ ರಿಯಾಜ್, ದಿಲೀಪ್ ಟರ್ಕಿ, ವಿ.ಆರ್.ರಘುನಾಥ್, ಆರ್.ಪಿ.ಸಿಂಗ್, ರಜನೀಶ್ ಮಿಶ್ರಾ, ಸರ್ದಾರ್ ಸಿಂಗ್, ಜಯದೀಪ್‍ ಕೌರ್, ಅಸುಂತ ಲಾಕ್ರಾ, ಸುನಿಂದು ಕೌರ್ ಅವರುಗಳಿದ್ದಾರೆ.
ಈ ಹಿಂದೆ ಭಾರತ ಹಾಕಿ ತಂಡದ ಆಯ್ಕೆ ಸಮಿತಿಯಲ್ಲಿದ್ದ ಕೊಡಗಿನವರಾದ ಬಿ.ಪಿ.ಗೋವಿಂದ ಅವರು ಇದೀಗ ಮೆಂಬರ್ ಆಫ್ ಹಾಕಿ ಇಂಡಿಯಾ ಹೈಪರ್ ಫಾರ್ಮೆನ್ಸ್ ಅಂಡ್ ಡೆವಲಪ್‍ಮೆಂಟ್ ಕಮಿಟಿ ಹಾಗೂ ಹಾಕಿ ಇಂಡಿಯಾ ಮಾಸ್ಟರ್ಸ್ ಕಮಿಟಿಯಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!