ಹೊಸದಿಗಂತ ಆನ್ ಲೈನ್ ಡೆಸ್ಕ್:
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಪ್ರಚಾರದಿಂದ ಮತ್ತೊಂದು ಸ್ಥಳಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ ಅವರುಈ ವೇಳೆ ತಮ್ಮ ವಾಹನಗಳನ್ನು ರಸ್ತೆ ಬದಿಗೆ ಸರಿಸಿ ಎರಡು ಆಂಬುಲೆನ್ಸ್ಗಳಿಗೆ ದಾರಿ ಮಾಡಿದ್ದಾರೆ.
ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮದ ಹಿನ್ನೆಲೆಯಲ್ಲಿ ಪ್ರಧಾನಿಗಳ ರಕ್ಷಣಾ ತಂಡ ಬಿಗಿ ಭದ್ರತೆಯನ್ನು ಏರ್ಪಡಿಸುತ್ತದೆ. ಈ ವೇಳೆ ಪ್ರಧಾನಿಗಳು ತೆರಳುವ ಮಾರ್ಗದಲ್ಲಿ ಯಾವುದೇ ವಾಹನಗಳು ತೆರಳಲು ಅನುಮತಿ ನೀಡುವುದಿಲ್ಲ. ಆದರೆ ಮೋದಿ ಅವರು ತೆರಳುವ ಮಾರ್ಗದಲ್ಲಿ ತುರ್ತು ಆರೋಗ್ಯ ಸೇವೆಗಾಗಿ ರೋಗಿಯನ್ನು ಕರೆತರಲಾಗುತ್ತಿತ್ತು. ಈ ವೇಳೆ ತಮ್ಮ ವಾಹನಗಳನ್ನು ನಿಧಾನಕ್ಕೆ ಚಲಿಸುವಂತೆ ಸೂಚಿಸಿ ಆಂಬುಲೆನ್ಸ್ಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ. ಆ ಮೂಲಕ ಮಾನವೀಯತೆ ಮೇರೆದಿದ್ದಾರೆ.