ಪಂಜಾಬ್ ನಲ್ಲಿ ಇನ್ಮುಂದೆ ಮಾಜಿ ಸಿಎಂ, ಸಚಿವರು ಸೇರಿ VVIPಗಳಿಗೆ ಇರಲ್ಲ ಭದ್ರತೆ: ಮಹತ್ವದ ನಿರ್ಧಾರಕೈಗೊಂಡ ಭಗವಂತ್ ಮಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಂಜಾಬ್​ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಆಮ್​ ಆದ್ಮಿ ಪಕ್ಷ ಅದಿಕಾರದ ಚುಕ್ಕಾಣಿ ಹಿಡಿಯಲು ಸಕಲ ಸಿದ್ಧತೆ ನಡೆಸುತ್ತಿದ್ದು, ಇದರ ನಡುವೆ ನೂತನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಭಗವಂತ್ ಮಾನ್​​ ಅವರು ಮುಖ್ಯಮಂತ್ರಿ ಆಗುವುದಕ್ಕೂ ಮೊದಲೇ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಪಂಜಾಬ್​​ನಲ್ಲಿ ಮಾಜಿ ಸಂಸದರು, ಮಾಜಿ ಸಚಿವರು, ಶಾಸಕರು ಸೇರಿದಂತೆ ವಿವಿಐಪಿಗಳಿಗೆ ನೀಡಿರುವ ಭದ್ರತೆಯನ್ನು ತಕ್ಷಣವೇ ಹಿಂಪಡೆದುಕೊಳ್ಳುವಂತೆ ಆದೇಶ ಹೊರಡಿಸಿದ್ದಾರೆ. ಈ ಪ್ರಕಾರ ಬಾದಲ್​ ಕುಟುಂಬ ಹೊರತುಪಡಿಸಿ, ಉಳಿದವರಿಗೆ ನೀಡಿರುವ ಭದ್ರತೆ ಹಿಂಪಡೆದುಕೊಳ್ಳಲು ಸೂಚಿಸಿದ್ದಾರೆ.
ರಾಜ್ಯದಲ್ಲಿ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದರೆ VIP ಸಂಸ್ಕೃತಿ ಸಂಪೂರ್ಣವಾಗಿ ತೆಗೆದು ಹಾಕಲಾಗುವುದು ಎಂದು ಭಗವಂತ್ ಚುನಾವಣಾ ಮುನ್ನ ಘೋಷಿಸಿದ್ದು, ಇದೀಗ ಕೊಟ್ಟ ಮಾತಿನಂತೆ ಇದೀಗ ನಿರ್ಧಾರ ಕೈಗೊಂಡಿದ್ದಾರೆ.
ಇದೇ ಮಾರ್ಚ್​ 16ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪಂಜಾಬ್​​ ಸಿಎಂ ಆಗಿ ಭಗವಂತ್ ಮಾನ್​​ ಪದಗ್ರಹಣ ಮಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!