ಚಾಂಪಿಯನ್‌ ಆಗಲು ಕಾದಿದ್ದೇವೆ…ಟ್ರಾಫಿಕ್‌ ಸಿಗ್ನಲ್‌ನಲ್ಲೂ ತಾಳ್ಮೆಯಿಂದ ಕಾಯಿರಿ: ಪೊಲೀಸರಿಂದ ಬಂತು ಕ್ರಿಯೇಟಿವ್​ ವಿಷ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಟಿ20 ವಿಶ್ವಕಪ್​ ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಸುಮಾರು 17 ವರ್ಷಗಳ ಬಳಿಕ ಕಪ್‌ ತನ್ನದಾಗಿಸಿಕೊಂಡಿದೆ. ಈ ಸಾಧನೆ ಮಾಡಿದ ರೋಹಿತ್‌ ಶರ್ಮಾ ಬಳಗಕ್ಕೆ ಅಭಿನಂದನೆಗಳ ಪ್ರವಾಹವೇ ಹರಿದು ಬರುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಮಧ್ಯೆ ವಿವಿಧ ಪೊಲೀಸ್‌ ಘಟಕಗಳು ಕ್ರಿಯೇಟಿವ್ ಆಗಿ ಅಭಿನಂದನೆ ಸಲ್ಲಿಸುವ ಮೂಲಕ ಗಮನ ಸೆಳೆದಿವೆ.

ಟೀಮ್‌ ಇಂಡಿಯಾಕ್ಕೆ ವಿಷ್‌ ಮಾಡುವ ಜತೆಗೆ ಟ್ರಾಫಿಕ್‌ ಜಾಗೃತಿಯನ್ನೂ ಮೂಡಿಸುತ್ತಿವೆ.

‘ಟೀಮ್‌ ಇಂಡಿಯಾ ಎರಡನೇ ಬಾರಿ ಟಿ20 ವಿಶ್ವಕಪ್‌ ಚಾಂಪಿಯನ್‌ ಆಗುವುದನ್ನು ನೋಡಲು ಸುಮಾರು 16 ವರ್ಷ 9 ತಿಂಗಳು ಮತ್ತು 5 ದಿನ (52,70,40,000 ಸೆಕೆಂಡ್‌) ಕಾದಿದ್ದೇವೆ. ಇದೇ ರೀತಿ ಟ್ರಾಫಿಕ್‌ ಸಿಗ್ನಲ್‌ನಲ್ಲಿಯೂ ಸ್ವಲ್ಪ ಹೊತ್ತು ತಾಳ್ಮೆಯಿಂದ ಕಾಯಿರಿ. ಉತ್ತಮ ಕ್ಷಣಕ್ಕಾಗಿ ಕಾಯುವುದರಲ್ಲಿ ಯಾವುದೇ ತಪ್ಪಿಲ್ಲ. ಏನಂತೀರಾ? ಟೀಮ್‌ ಇಂಡಿಯಾಕ್ಕೆ ಹೃತೂರ್ವಕ ಅಭಿನಂದನೆಗಳು’ ಎಂದು ದೆಹಲಿ ಪೊಲೀಸ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

https://x.com/DelhiPolice/status/1807112442079560118?ref_src=twsrc%5Etfw%7Ctwcamp%5Etweetembed%7Ctwterm%5E1807112442079560118%7Ctwgr%5E2226ed0907a38b9d3985d60fe652bec70a53d42e%7Ctwcon%5Es1_&ref_url=https%3A%2F%2Fvistaranews.com%2Fsports%2Ft20-world-cup-2024-16-years-9-months-5-days-delhi-police-wish-viral%2F684543.html

ಇನ್ನು ಉತ್ತರ ಪ್ರದೇಶ ಪೊಲೀಸರೂ ಕೂಡ ಪೋಸ್ಟ್‌ ಶೇರ್‌ ಮಾಡಿದ್ದಾರೆ. ಭಾರತೀಯ ಬೌಲರ್‌ಗಳ ಪ್ರದರ್ಶನವನ್ನು ಕ್ರಿಮಿನಲ್ ಕೃತ್ಯಕ್ಕೆ ಹೋಲಿಸುವ ತಮ್ಮ ಹಾಸ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ. ‘ಬ್ರೇಕಿಂಗ್‌ ನ್ಯೂಸ್‌: ದಕ್ಷಿಣ ಆಫ್ರಿಕನ್ನರ ಹೃದಯ ಚೂರು ಮಾಡಿದ ಭಾರತೀಯ ಬೌಲರ್‌ಗಳು ತಪ್ಪಿತಸ್ಥರು ಎಂದು ಸಾಬೀತಾಗಿದೆ. ಇದಕ್ಕಿರುವ ಶಿಕ್ಷೆ: ಕೋಟ್ಯಂತರ ಅಭಿಮಾನಿಗಳಿಂದ ಜೀವಮಾನದ ಪ್ರೀತಿ’ ಎಂದು ಬರೆದುಕೊಂಡಿದ್ದಾರೆ.

https://x.com/Uppolice/status/1807113092670586930?ref_src=twsrc%5Etfw%7Ctwcamp%5Etweetembed%7Ctwterm%5E1807113092670586930%7Ctwgr%5E2226ed0907a38b9d3985d60fe652bec70a53d42e%7Ctwcon%5Es1_&ref_url=https%3A%2F%2Fvistaranews.com%2Fsports%2Ft20-world-cup-2024-16-years-9-months-5-days-delhi-police-wish-viral%2F684543.html

ಮುಂಬೈ ಟ್ರಾಫಿಕ್‌ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಕ್ರಿಯಾತ್ಮಕತೆಯನ್ನು ಪ್ರದರ್ಶಿಸಿದ್ದಾರೆ. ‘IND 29 June 2024ʼʼ ನಂಬರ್‌ ಪ್ಲೇಟ್‌ ಹೊಂದಿರುವ ಕಾರನ್ನು ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಚಲಾಯಿಸುತ್ತಿರುವಂತೆ ಫೋಟೊ ಎಡಿಟ್‌ ಮಾಡಿ ಹಂಚಿಕೊಂಡಿದ್ದಾರೆ.’ ನಂಬರ್‌ ಪ್ಲೇಟ್‌ನ ಕನಸು ನನಸಾಗಿದೆ’ ಎಂದು ಕ್ಯಾಪ್ಶನ್‌ ನೀಡಿದ್ದಾರೆ.

https://x.com/MTPHereToHelp/status/1807112822725226592?ref_src=twsrc%5Etfw%7Ctwcamp%5Etweetembed%7Ctwterm%5E1807112822725226592%7Ctwgr%5E2226ed0907a38b9d3985d60fe652bec70a53d42e%7Ctwcon%5Es1_&ref_url=https%3A%2F%2Fvistaranews.com%2Fsports%2Ft20-world-cup-2024-16-years-9-months-5-days-delhi-police-wish-viral%2F684543.html

ಭಾರತ ಕಪ್‌ ಜಯಶಾಲಿಯಾಗುತ್ತಿದ್ದಂತೆ ಭಾರತದ ಎಲ್ಲೆಡೆ ಸಡಗರ ಮನೆ ಮಾಡಿತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಅಭಿಮಾನಿಗಳು ಭಾರತದ ಗೆಲುವನ್ನು ಕೊಂಡಾಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!