Wednesday, June 29, 2022

Latest Posts

ಕಂಪ್ಯೂಟರ್ ಖರೀದಿಸಬೇಕೆ? ಹಾಗಿದ್ದರೆ ಈ ಅಂಶಗಳನ್ನು ಗಮನಿಸಿ…

ಇಂದು ಎಲ್ಲಾ ಕ್ಷೇತ್ರಕ್ಕೂ ಕಂಪ್ಯೂಟರ್ ಕಾಲಿರಿಸಿದ್ದು, ಲಾಕ್ದೌನ್ ಶುರುವಾದ ನಂತರವಂತೂ ಕಂಪ್ಯೂಟರ್, ಲ್ಯಾಪ್ ಟಾಪ್ ಗಳ ಬೇಡಿಕೆಗಳು ಹೆಚ್ಚಿವೆ. ಆದರೆ ಬಹಳಷ್ಟು  ಮಂದಿಗೆ ಖರೀದಿಸುವಾಗ  ಏನೆಲ್ಲಾ ಅಂಶಗಳು ಇರಬೇಕು ಗೊತ್ತಿರುವುದಿಲ್ಲ ಹಾಗಾಗಿ ಸ್ವಲ್ಪ ಗೊತ್ತಿದ್ದವರು ಕಾದು ಕರೆದುಕೊಂಡು ಹೋಗ್ತಾರೆ ಅಥವಾ ನೇರವಾಗಿ ಮಳಿಗೆಗೆ ಹೋಗಿ ಅಲ್ಲಿಯವರ ಹತ್ತಿರ ವಿಚಾರಿಸಿ ಖರೀದಿಸುತ್ತಾರೆ. ಇನ್ನು ಮುಂದೆ ಈ ಚಿಂತೆ ಬೇಡ.. ನಿಮ್ಮ ಕಂಪ್ಯೂಟರ್ ನ ಸಾಮರ್ಥ್ಯಗಳು ಏನಿದೆ ತಿಳಿಯಿರಿ…

ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್: ನೀವು ಮೊದಲು ಯಾವುದನ್ನು ಖರೀದಿಸಬೇಕು ಎಂದು ತೀರ್ಮಾನಿಸೋದು ಮುಖ್ಯ. ಮನೆಯಲ್ಲಿ ಕೆಲಸ ಮಾಡೋಕೆ ಡೆಸ್ಕ್ ಟಾಪ್, ಹೊರಗೆ ಹೋಗಿ ಕೆಲಸ ಮಾಡೋರಿಗೆ ಲ್ಯಾಪ್ ಟಾಪ್ ಉತ್ತಮ ಆಯ್ಕೆಯಾಗಿದೆ.

ಆನ್ ಲೈನ್/ ನೇರ ಮಾರಾಟ ಮಳಿಗೆ: ಆನ್ ಲೈನ್ ಮಾರುಕಟ್ಟೆಗಳಲ್ಲಿ ಅನೇಕ ಆಫರ್ ಗಳು ನಮಗೆ ಆಕರ್ಷಕವಾಗಿ ಕಾಣುತ್ತದೆ. ಆದರೆ ನಿಮಗೆ ಬೇಕಾದ ರೀತಿಯ ಫೀಚರ್ಸ್, ಡಿಸೈನ್ ಗಳು ಆನ್ ಲೈನ್ ಗಿಂತ ಹೆಚ್ಚು ನೇರ ಮಾರುಕಟ್ಟೆಯಲ್ಲಿ ಖರೀದಿಸೋದೇ ಉತ್ತಮ.

ಪ್ರೊಸೆಸರ್: ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್ (ಸಿಪಿಯು) ಎಂದೂ ಕರೆಯಲ್ಪಡುವ ಪ್ರೊಸೆಸರ್ ಕಂಪ್ಯೂಟರ್‌ನ ಮುಖ್ಯ ಕೇಂದ್ರವಾಗಿದೆ. ಇದು ಕಂಪ್ಯೂಟರ್ ನ ಮೆದುಳಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ನಿಮ್ಮ ಕಂಪ್ಯೂಟರ್ ವೇಗವಾಗಿ ಪ್ರೋಗ್ರಾಂಗಳು ಕಾರ್ಯನಿರ್ವಹಿಸುತ್ತದೆ.

RAM: ನಿಮ್ಮ ಕಂಪ್ಯೂಟರ್‌ನ ಮಲ್ಟಿ ಟಾಸ್ಕ್ ಮಾಡಲು ಸಾಧ್ಯವಾಗೋದೆ ಈ ರ್ಯಾಮ್ ನಿಂದ. ಇದು ಗಿಗಾಬೈಟ್‌ಗಳಲ್ಲಿ (ಜಿಬಿ) ಅಳೆಯಲಾಗುತ್ತದೆ. ಹೆಚ್ಚಿನ RAM, ನಿಮ್ಮ ಕಂಪ್ಯೂಟರ್ ಈ ಪ್ರೋಗ್ರಾಂಗಳನ್ನು ಉತ್ತಮವಾಗಿ ನಿರ್ವಹಿಸಬಹುದು.

ಹಾರ್ಡ್ ಡಿಸ್ಕ್: ನಿಮ್ಮ ಹಾರ್ಡ್ ಡ್ರೈವ್ ಸಂಗ್ರಹಣೆಗಿಂತ RAM ವಿಭಿನ್ನವಾಗಿದೆ. ನಿಮ್ಮ ಹಾರ್ಡ್ ಡ್ರೈವ್ ನಿಮ್ಮ ದೀರ್ಘಕಾಲೀನ ಮೆಮೊರಿಯಾಗಿರುತ್ತದೆ. ನಿಮಗೆ ಎಷ್ಟು ಹಾರ್ಡ್ ಡ್ರೈವ್ ಸಂಗ್ರಹಣೆ ಬೇಕು ಎಂಬುದು ನಿಮ್ಮ ಕಂಪ್ಯೂಟರ್ ಬಳಕೆ ಮತ್ತು ನೀವು ಸಂಗ್ರಹಿಸುವುದರ ಮೇಲೆ ಅವಲಂಭಿತವಾಗಿರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss