Monday, August 8, 2022

Latest Posts

ನಿಮಗೆ Smartwatch ಕೊಳ್ಳೋ ಆಸೆ ಇದ್ಯಾ? ಹಾಗಿದ್ರೆ ಇದರಲ್ಲೇನಿದೆ ಲಾಭ? ಇಲ್ಲಿದೆ ನೋಡಿ

ಈಗಿನ ಟೆಕ್ ಬೆಳವಣಿಗೆ ಸಖತ್ ಫಾಸ್ಟ್ ಆಗಿದ್ದು, ದಿನೇ ದಿನೇ ಟ್ರೆಂಡಿ ಮೊಬೈಲ್, ಐಪ್ಯಾಡ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಯುವಕರಿಗೆ ಸ್ಮಾರ್ಟ್ ವಾಚ್ ಖರೀದಿಸೋದು ಎಲ್ಲರ ಕನಸಾಗಿರುತ್ತದೆ. ಹಾಗಿದರೆ ಅಂತಹದ್ದೇನಿದೆ ಆ ವಾಚ್ ನಲ್ಲಿ ನೋಡಿ..

ಕೇವಲ ಸಮಯ ಹೇಳೋದಿಲ್ಲ: ವಾಚ್ ಎಂದಾಕ್ಷಣ ಇದರಲ್ಲಿ ಕೇವಲ ಟೈಮ್ ತೋರಿಸೋದಿಲ್ಲ. ಬದಲಿಗೆ ನಿಮ್ಮ ಆರೋಗ್ಯ, ಕ್ಯಾಲೆಂಟರ್, ಹೃದಯ ಬಡಿತ, ರಕ್ತದೊತ್ತಡ, ವಾಕಿಂಗ್ ಬಗ್ಗೆಯೂ ತೋರಿಸುತ್ತದೆ.

The Best Smartwatches for 2021 | PCMag

ಕಾಲ್ಸ್- ಮೆಸೇಜ್: ನಿಮ್ಮ ಮೊಬೈಲ್ ಬರುವ ಕಾಲ್ಸ್, ಮೆಸೇಜ್ ಗಳಿಗೆ ನೀವು ಈ ಸ್ಮಾರ್ಟ್ ವಾಚ್ ನಲ್ಲೇ ಉತ್ತರಿಸಬಹುದು. ಇದರಲ್ಲಿನ ವೈಬ್ರೇಷನ್ ನಿಮಗೆ ಕಾಲ್ ಬರುವುದನ್ನು ತಿಳಿಸುತ್ತದೆ.

Which Smartwatch Can Make Calls Without Phone | User Guide - Smartwatch

ಮೊಬೈಲ್ ಹುಡುಕೋದು ಸುಲಭ: ಎಲ್ಲೋ ಆತುರದಲ್ಲಿ ಎತ್ತಿಟ್ಟ ಮೊಬೈಲ್ ಗಳನ್ನು ಹುಡುಗೋದಕ್ಕೆ ಇದರಲ್ಲಿರುವ ‘ಫೈಂಡ್ ಫೋನ್’ ಆಪ್ಷನ್ ನಿಂದ ನಿಮ್ಮ ಮೊಬೈಲ್ ರಿಂಗ್ ಆಗುತ್ತದೆ. ಆಗ ನಿಮಗೆ ಕೆಲವೇ ನಿಮಿಷಗಳಲ್ಲಿ ಮೊಬೈಲ್ ಸಿಗಲಿದೆ.

How to Find My Phone Location on Samsung Gear S3 - YouTube

ಸಾಮಾಜಿಕ ಜಾಲತಾಣ: ಫೇಸ್ ಬುಕ್, ಇನ್ಸ್ ಟಾಗ್ರಂ, ಟ್ವಿಟರ್ ನ ನೋಟಿಫಿಕೇಷನ್ ಗಳನ್ನು ನೀವು ನಿಮ್ಮ ವಾಚ್ ನಲ್ಲೇ ನೋಡಬಹುದು.

Facebook Is Working on a Fitness-Focused Smartwatch | Beebom

ಮಲ್ಟಿ ಟಾಸ್ಕ್: ಕೆಲಸದಲ್ಲಿ ಬ್ಯುಸಿ ಇರುವಾಗ ಕೆಲವೊಮ್ಮೆ ಮೊಬೈಲ್ ನೋಡೋಕೆ ಆಗೋದಿಲ್ಲ. ಆ ಸಮಯದಲ್ಲಿ ಈ ಸ್ಮಾರ್ಟ್ ಫೋಸ್ ಸಹಾಯ ಮಾಡುತ್ತದೆ. ಇದರಲ್ಲಿ ಕೆಲವು ವಾಟರ್ ಫ್ರೂಫ್ ಕೂಡ ಇರುತ್ತದೆ.

Aloha from Maui - Diving Molokini Crater : pebble

ಹೆಚ್ಚು ಬ್ಯಾಟೆರಿ: ನಮ್ಮ ಮೊಬೈಲ್ ಸ್ಮಾರ್ಟ್ ಆಗಿರುವಾಗ ಈ ಸ್ಮಾರ್ಟ್ ವಾಚ್ ಯಾಕೆ ಅಂದುಕೊಂಡರೆ ತಪ್ಪು. ಇದರಲ್ಲಿ ಹೆಚ್ಚು ಬ್ಯಾಟೆರಿ ಲೈಫ್ ಇರಲಿದ್ದು, ಹೆಚ್ಚು ಹೊತ್ತು ನೀವು ಜನರೊಂದಿಗೆ ಸಂಪರ್ಕದಲ್ಲಿರಬಹುದು.

Apple Watch battery life

ವಿಡಿಯೋ: ಬೋರ್ ಆದಾಗ ಅಥವಾ ಟ್ರಾವೆಲ್ ಮಾಡುವಾಗ ನೀವು ಈ ವಾಚ್ ನಲ್ಲೇ ಯುಟ್ಯೂಬ್ ನಲ್ಲಿ ಸಿನಿಮಾ, ಹಾಡುಗಳನ್ನು ನೋಡಬಹುದು. ಇದು ಹೆಚ್ಚು ಮೊಬೈಲ್ ನಂತೆ ಕೆಲಸ ಮಾಡುತ್ತದೆ.

K8 Smartwatch | Android 4.4 | WiFi | GPS | 3G | Youtube | Maps 🔍 2 -  YouTube

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss