Sunday, August 14, 2022

Latest Posts

ಲಾಕ್ ಡೌನ್ ವೇಳೆ ಲಸಿಕಾ ಕೇಂದ್ರಕ್ಕೆ ತೆರಳಬೇಕೇ? ಹಾಗಿದ್ದರೆ ಈ ಎಸ್‌ಎಂಎಸ್ ಕಡ್ಡಾಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಂದಿನಿಂದ 18 ರಿಂದ 44ವರ್ಷ ವಯೋಮಾನದವರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದ್ದು, ಲಸಿಕಾ ಕೇಂದ್ರಕ್ಕೆ ತೆರಳುವವರ ಬಳಿ ಲಸಿಕೆ ಪಡೆಯುವ ಸಮಯ ನಿಗದಿಯಾಗಿರುವ ಎಸ್ ಎಂ ಎಸ್ ಸಂದೇಶ ಇರುವುದು ಕಡ್ಡಾಯವಾಗಿದೆ.

ಈ ಎಸ್ ಎಂಎಸ್ ಪರಿಶೀಲಿಸಿದ ಬಳಿಕವಷ್ಟೇ ಪೊಲೀಸರು ಲಸಿಕಾ ಕೇಂದ್ರಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಇಂದಿನಿಂದ ರಾಜ್ಯಾದ್ಯಂತ ಕಟ್ಟು ನಿಟ್ಟಿನ ಲಾಕ್ ಡೌನ್ ಜಾರಿಯಾಗಿದ್ದರಿಂದ ಲಸಿಕೆ ಪಡೆಯಲು ಹೋಗುವವರಿಗೆ ಲಾಕ್ ಡೌನ್ ನಿಯಮ ಅಡ್ಡಿಯಾಗಬಾರದೆಂಬ ಕಾರಣಕ್ಕೆ ಸಂದೇಶವನ್ನೇ ಪಾಸ್ ರೀತಿ ಬಳಸಲು ಅವಕಾಶ ನೀಡಲಾಗಿದೆ.

ಲಸಿಕೆ ಪಡೆಯಲು ಇಚ್ಚಿಸುವ 18 ವರ್ಷ ಮೇಲ್ಪಟ್ಟವರು ಆನ್’ಲೈನ್ ನಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನೋಂದಣಿ ನಂತರ ಲಸಿಕೆ ಪಡೆಯುವ ಸಮಯವನ್ನು ಖಾತರಿಪಡಿಸಿ ಫಲಾನುಭವಿಗೆ ಸಂದೇಶ ಬರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss