Saturday, August 13, 2022

Latest Posts

ನಿಮ್ಮ ಮಕ್ಕಳಿಗೆ ಓದಿನಲ್ಲಿ ಏಕಾಗ್ರತೆ ಹೆಚ್ಚಾಗಬೇಕೇ? ಹಾಗಿದ್ದರೆ ಅವರಿಗೆ ತಪ್ಪದೇ ಈ ಆಹಾರಗಳನ್ನು ನೀಡಿ

ಕೊರೋನಾ ಸಂಕಷ್ಟಕ್ಕೆ ಅಂತ್ಯ ಹಾಡಿ ಇದೀಗ ಸಾಕಷ್ಟು ಮಕ್ಕಳು ಶಾಲೆ, ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಇಷ್ಟು ದಿನ ಶಾಲೆ, ಪುಸ್ತಕವನ್ನೇ ಮರೆತುಬಿಟ್ಟಿದ್ದ ಮಕ್ಕಳಿಗೆ ಈಗ ಒಮ್ಮೆಲೇ ಪರೀಕ್ಷೆ ಎಂಬ ಮಹಾಯುದ್ಧಕ್ಕೆ ಸಿದ್ಧಗೊಳಿಸಬೇಕಿದೆ. ಆದರೆ ಈ ಸಂದರ್ಭದಲ್ಲಿ ಮಕ್ಕಳು ಯಾವ ಆಹಾರ ಸೇವಿಸಿದರೆ ಅವರ ನೆನಪಿನ ಶಕ್ತಿ ಹೆಚ್ಚಾಗುತ್ತದೆ? ಇಲ್ಲಿದೆ ಮಾಹಿತಿ…

ಮೊಟ್ಟೆ: ಇದರಲ್ಲಿರುವ ಪ್ರೋಟೀನ್ ಅಂಶಗಳು ಮಕ್ಕಳ ಮೆದುಳನ್ನು ಚುರುಕುಗೊಳಿಸುತ್ತದೆ. ಇದರಿಂದ ಮಕ್ಕಳು ಹೆಚ್ಚು ಏಕಾಗ್ರಚಿತ್ತರಾಗಿರುತ್ತಾರೆ.

ಮೊಸರು: ಓದುವ ಮಕ್ಕಳಿಗೆ ಪ್ರೋಟೀನ್ ಅತ್ಯಗತ್ಯ. ಹಾಗಾಗಿ ನೀವು ಮಕ್ಕಳಿಗೆ ಮೊಸರು ಅಥವಾ ಸ್ವಲ್ಪ ಸಕ್ಕರೆ ಮಿಶ್ರಿತ ಮೊಸರು ನೀಡುವುದು ಉತ್ತಮ.

ಸೊಪ್ಪು: ಮಕ್ಕಳಿಗೆ ಹೆಚ್ಚಾಗಿ ಅಗತ್ಯವಿರುವ ವಿಟಮಿನ್ಸ್ ಗಳು ಸೊಪ್ಪಿನಲ್ಲಿರುತ್ತದೆ. ದಿನದ ಒಂದು ಹೊತ್ತಿನ ಊಟದಲ್ಲಾದರೂ ಸೊಪ್ಪನ್ನು ಬಳಸಿದರೆ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು.

ಮೀನು: ಮೀನಿನಲ್ಲಿರುವ ವಿಟಮಿನ್ ಡಿ ಹಾಗೂ ಒಮೇಗಾ 3 ಅಂಶಗಳು ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ,.

ಕಾಳುಗಳು: ಇದರಲ್ಲಿನ ಫಾಟಿ ಆಸಿಡ್, ವಿಟಮಿನ್, ಮಿನರಲ್ಸ್ ಗಳು ಮಕ್ಕಳ ಮೆದುಳಿನ ಬೆಳವಣಿಗೆಗೆ ಹೆಚ್ಚು ಸಹಕಾರಿಯಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss