Sunday, April 11, 2021

Latest Posts

ಯಾರ್ ಯಾರ್ ನಿಮ್ಮ ವಾಟ್ಸಾಪ್ ಡಿಪಿ ನೋಡ್ತಾರೆ ತಿಳ್ಕೋಬೇಕಾ? ಹಾಗಿದ್ರೆ ಈ ರೀತಿ ಮಾಡಿ..

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ವಾಟ್ಸಾಪ್ ಬಳಕೆ ಮಾಡುತ್ತಿದ್ದಾರೆ. ವೃದ್ಧರಿಂದ ಹಿಡಿದು ಹಾಲುಗೆನ್ನೆಯ ಮಕ್ಕಳವರೆಗೂ ಅಂಗೈ ಅಗಲದ ಮೊಬೈಲ್ ಹಿಡಿದು ಕುಳಿತುಬಿಡುತ್ತಾರೆ. ವಾಟ್ಸಾಪ್ ಬಳಕೆದಾರರು ಹೆಚ್ಚಾದಂತೆ ವಾಟ್ಸಾಪ್ ಫೀಚರ್ ಗಳು ಕೂಡ ಹೆಚ್ಚುತ್ತಿದೆ. ಇಷ್ಟು ದಿನ ನಮ್ಮ ವಾಟ್ಸಾಪ್ ಡಿಪಿಯನ್ನು ಯಾರೆಲ್ಲ ನೋಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿರಲಿಲ್ಲ. ಆದರೆ ಈಗ ಅದನ್ನು ಕೂಡ ತಿಳಿದುಕೊಳ್ಳಬಹುದಾಗಿದೆ.

ಎಷ್ಟೋ ಸಲ ನಮ್ಮ ಕಾಂಟೆಕ್ಟ್ ಲಿಸ್ಟ್ ಬಿಟ್ಟು ಬೇರೆಯವರು ನಮ್ಮ ವಾಟ್ಸಾಪ್ ಡಿಪಿ ನೋಡುತ್ತಿರುತ್ತಾರೆ. ಆದರೆ ಯಾರು ನೋಡುತ್ತಿದ್ದಾರೆ ಎಂದು ತಿಳಿದುಕೊಳ್ಳಲಾಗದೇ ಇಷ್ಟು ದಿನ ಸುಮ್ಮನೆ ಇರುತ್ತಿದ್ರಿ. ಆದರೆ ಇನ್ಮುಂದೆ ಯಾರು ನಿಮ್ಮ ಡಿಪಿ ನೋಡುತ್ತಿದ್ದಾರೆ ಎಂದು ತಿಳಿದುಕೊಳ್ಳುವುದು ಸುಲಭ.

ಪ್ಲೇ-ಸ್ಟೋರ್‌ನಿಂದ WhatsApp- Who Viewed Me ಅಥವಾ Whats Tracker ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ. ಇದರ ಜೊತೆಯಲ್ಲಿ, 1 mobile market ನ್ನು ಕೂಡ ಡೌನ್‌ಲೋಡ್ ಮಾಡಬೇಕಾಗುತ್ತದೆ. 1mobile market ಆಪ್ ಇಲ್ಲದೆ WhatsApp- Who Viewed Me ಡೌನ್‌ಲೋಡ್ ಆಗುವುದಿಲ್ಲ.

WhatsApp- Who Viewed Me ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡ ನಂತರ   24 ಗಂಟೆಗಳಲ್ಲಿ ನಿಮ್ಮ ಪ್ರೊಫೈಲ್ ಫೋಟೋವನ್ನು ಯಾರು ನೋಡುತ್ತಿದ್ದಾರೆ ಎನ್ನುವ ಲಿಸ್ಟ್ ನಿಮಗೆ ಸಿಗುತ್ತದೆ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss